ಶಾಸಕ ಸತೀಶ ಜಾರಕಿಹೊಳಿ ಸೇರಿ ಕಾಂಗ್ರೆಸ್ ಮುಂಚೂಣಿ ನಾಯಕರಿಗೆ ಮಹತ್ವದ ಜವಾಬ್ದಾರಿ


ಎಐಸಿಸಿ ಅಧಿಕೃತ ಘೋಷಣೆಗೆ ಕ್ಷಣಗಣನೆ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ ಮುಂದುವರಿಕೆಗೆ ಹೈಕಮಾಂಡ್ ನಿರ್ಧಾರ ಪ್ರಕಟಿಸಿದ ಬೆನ್ನ ಹಿಂದೆಯೇ ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಸ್.ಆರ್.ಪಾಟೀಲ ಸೇರಿ ರಾಜ್ಯದ ಮುಂಚೂಣಿ ಕಾಂಗ್ರೆಸ್ ಮುಖಂಡರಿಗೆ ಮಹತ್ವದ ಜವಾಬ್ದಾರಿಗಳನ್ನು ವಹಿಸಲು ಎಐಸಿಸಿ ಮಂಗಳವಾರ ನಿರ್ಧರಿಸಿದೆ.  ಹುದ್ದೆಗಳ ಭಾಗ್ಯ ಜಾರಿಗೊಳಿಸಲು ಭರ್ಜರಿ ಸಿದ್ಧತೆ ನಡೆದಿದ್ದು,  ಈ ಕುರಿತು ಎಐಸಿಸಿ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

 ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗಂಡೂರಾವ್, ಮಾಜಿ ಸಚಿವ ಎಸ್.ಆರ್.ಪಾಟೀಲ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ,  ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷತೆ ಜವಾಬ್ದಾರಿ  ವಹಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

  ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಸೇರಿ ಮುಂಚೂಣಿ ನಾಯಕರಿಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿಗಳನ್ನು ವಹಿಸಿದೆ ಎಂದು ಗೊತ್ತಾಗುತ್ತಿದ್ದಂತೆ ಮುಖಂಡರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

15 Responses to "ಶಾಸಕ ಸತೀಶ ಜಾರಕಿಹೊಳಿ ಸೇರಿ ಕಾಂಗ್ರೆಸ್ ಮುಂಚೂಣಿ ನಾಯಕರಿಗೆ ಮಹತ್ವದ ಜವಾಬ್ದಾರಿ"

 1. MUNEERAHAMMAD KAZI   May 30, 2017 at 6:03 pm

  Good job

  Reply
 2. Raj hiremath   May 30, 2017 at 6:16 pm

  super

  Reply
 3. koppad   May 30, 2017 at 6:27 pm

  Good responsible man got good responsibility

  Reply
 4. Khalil Ahmed Karjagi   May 30, 2017 at 6:29 pm

  Good job

  Reply
 5. Kempanna shirahatti   May 30, 2017 at 6:55 pm

  ಅಭಿನಂದನೆಗಳು ಸರ್

  Reply
 6. gopal anchan   May 30, 2017 at 7:48 pm

  congrats sr

  Reply
 7. ಪ್ರಕಾಶ್ ಆರ್ ಗುಳೇದಗುಡ್ಡ   May 30, 2017 at 8:09 pm

  ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಜವಾಬ್ದಾರಿ ನೀಡುತ್ತಿರುವದು ಉತ್ತಮ ಬೆಳವಣಿಗೆ. …..

  Reply
 8. Garani Girish   May 30, 2017 at 8:25 pm

  ನಮ್ಮೆಲ್ಲರ ನಾಯಕ ಸತೀಶ್ ಜಾರಕಿಹೊಳಿರವರಿಗೆ ಅಭಿನಂದನೆಗಳು.

  Reply
 9. Okesh   May 30, 2017 at 8:28 pm

  ಅಭಿನಂದನೆಗಳು

  Reply
 10. Johnson   May 30, 2017 at 8:44 pm

  Good job take dession very good from aicc

  Reply
 11. Shivaputrappa S Dodamani   May 30, 2017 at 9:32 pm

  Super Sir

  Reply
 12. Anuradha Sheleppagol   May 30, 2017 at 10:27 pm

  ಅಭಿನಂದನೆಗಳು ಸರ್

  Reply
 13. Avinash c guttedar   May 31, 2017 at 11:48 am

  Shuper

  Reply
 14. Lagamanna naik   May 31, 2017 at 9:35 pm

  Good

  Reply
 15. Shrinivas   October 1, 2017 at 12:00 pm

  ಅಭಿನಂದನೆಗಳು ನಮ್ಮ soukar ಗೆ

  Reply

Leave a Reply

Your email address will not be published.