ಕಾಂಗ್ರೆಸ್ ಭಿನ್ನಮತಕ್ಕೆ ವೇಣು ಸೂತ್ರ: ಪಕ್ಷದ ಉಸ್ತುವಾರಿಗೆ ಸತೀಶ, ಯೋಜನೆ ಉಸ್ತುವಾರಿಗೆ ರಮೇಶ

ಬೆಂಗಳೂರಿನಲ್ಲಿ ಸೋಮವಾರ ನಡೆದ ಸಂಧಾನ ಸಭೆಯ ನಂತರ ಜಾರಕಿಹೊಳಿ ಸಹೋದರರು ಕೈ ಕುಲುಕಿ ಒಗ್ಗಟ್ಟಿನ ಸಂದೇಶ ಸಾರಿದ್ದು ಹೀಗೆ

ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಭಿನ್ನಮತಕ್ಕೆ  ಹೈ ಕಮಾಂಡ್ ಬ್ರೇಕ್

ಬೆಂಗಳೂರು: ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಸಮ್ಮುಖದಲ್ಲಿ  ಸೋಮವಾರ ನಡೆದ ಕಾಂಗ್ರೆಸ್ ಜಿಲ್ಲಾ ಸಮಿತಿ ಮುಖಂಡರ ಸಭೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಭಿನ್ನಮತವನ್ನು ಸಂಧಾನ ಸೂತ್ರದ ಮೂಲಕ ತಣಿಸಿ    ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ.
 ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಿದ್ಧಗೊಳಿಸುವ ನಾಯಕರ ಪ್ರಯತ್ನ ಕೊನೆಗೂ ಕೈಗೂಡಿದಂತಾಗಿದ್ದು, ಜವಾಬ್ದಾರಿ ಹಂಚಿಕೆ ಸೂತ್ರದ ಮೂಲಕ ಜಿಲ್ಲೆಯ ಕಾಂಗ್ರೆಸ್ ನಲ್ಲಿದ್ದ ಭಿನ್ನಮತವನ್ನು ಶಮನಗೊಳಿಸಲಾಗಿದೆ.
 ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬೆಳಗಾವಿ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಮಾಜಿ  ಸಚಿವ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಪಾಲ್ಗೊಂಡಿದ್ದರು.
 ಬೆಳಗಾವಿ ಜಿಲ್ಲೆ ಕಾಂಗ್ರೆಸ್ ನ ಕಾರ್ಯಚಟುವಟಿಕೆಗಳು, ದೂರುಗಳು, ಭಿನ್ನಮತ, ಮುಖಂಡರ ವರ್ತನೆಯ ಬಗ್ಗೆ ಮಾಹಿತಿ ಕಲೆ ಹಾಕಿದ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರು, ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯಗಳ ಶಮನಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರು. ಈ ಸೂತ್ರದಂತೆ ಜಿಲ್ಲೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳ ಜವಾಬ್ದಾರಿಯನ್ನು ಶಾಸಕ ಸತೀಶ ಜಾರಕಿಹೊಳಿ ಅವರು ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಸಚಿವ ರಮೇಶ ಜಾರಕಿಹೊಳಿ ಅವರಿಗೆ ವಹಿಸಬೇಕು ಎಂದು ತಿಳಿಸಿದರು.  ಜಾರಕಿಹೊಳಿ ಸಹೋದರರು ಈ ಸಂಧಾನ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರು.
 ಸಮನ್ವಯದ ಕೊರತೆಯಿಂದ ಭಿನ್ನಮತ ತಲೆದೋರಿದೆ. ಹೀಗಾಗದಂತೆ ತಡೆಯಲು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿ ಸಮನ್ವಯ ಸಮಿತಿ ರಚಿಸಲಾಗುವುದು. ಸಮಸ್ಯೆಗಳನ್ನು ಸಮಿತಿಗೆ ಹೇಳಿಕೊಂಡರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ ಸಭೆಗೆ ವಿವರಿಸಿದರು ಎಂದು ಗೊತ್ತಾಗಿದೆ.
 ನಾಯಕರು ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು. ಇಬ್ಬರೂ ಒಟ್ಟಿಗೆ ಹೋಗಬೇಕು ಎಂದು ರಾಜ್ಯದ ಉಸ್ತುವಾರಿ ಸೂಚಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಜಾರಕಿಹೊಳಿ ಸಹೋದರರು ಪರಸ್ಪರ ಕೈ ಕುಲುಕಿ ಫೋಟೋ ಕ್ಲಿಕ್ಕಿಸುವವರೆಗೂ ಕೈ ಹಿಡಿದು ನಿಂತರು.
 ಸಹೋದರರಿಬ್ಬರೂ ಕಚ್ಚಾಟ ಬಿಡಬೇಕು. ಕಚ್ಚಾಟದಿಂದ ಈಗಾಗಲೇ ಮೇಯರ್ ಸ್ಥಾನ ತಪ್ಪಿದೆ. ಕಚ್ಚಾಟ ಮುಂದುವರಿದರೆ ಎಲ್ಲರಿಗೂ ನಷ್ಟ ಹೊಂದಾಣಿಕೆಯಿದ್ದರೆ ಎಲ್ಲವೂ ಸುಸೂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದನಿಗೂಡಿಸಿದರು.
ಸಚಿವ ದಿನೇಶ ಗುಂಡೂರಾವ್, ಶಾಸಕ ಫಿರೋಜ್ ಸೇಠ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಇತರರು ಇದ್ದರು.

9 Responses to "ಕಾಂಗ್ರೆಸ್ ಭಿನ್ನಮತಕ್ಕೆ ವೇಣು ಸೂತ್ರ: ಪಕ್ಷದ ಉಸ್ತುವಾರಿಗೆ ಸತೀಶ, ಯೋಜನೆ ಉಸ್ತುವಾರಿಗೆ ರಮೇಶ"

 1. K.VITTAL SHETTY   May 22, 2017 at 6:47 pm

  Congress is taking the right step to clear the misunderstanding between Government and Party. More understanding and working together will further strengthen the party at all levels

  Reply
 2. sharanreddy Hattigudur   May 22, 2017 at 8:02 pm

  ಇಬ್ಬರು ಸಹೋದರರು ಒಂದಾಗಿ ಹೂದಾರು ಬೆಳಗಾವಿ ಕಾಂಗ್ರೆಸ್ ಪಕ್ಷ ಶಾಶ್ವತವಾಗಿ ಅಧಿಕಾರದಲೢ ಇರತಾರ

  Reply
 3. Advocate. Bharatesh Nidasosi   May 22, 2017 at 8:58 pm

  Shri. Satish Jarakiholi sir is powerful and eminent person to handle party works. And he is a real Leader of Belagavi district.

  Reply
 4. Advoccate. Bharatesh Nidsosi   May 22, 2017 at 9:06 pm

  Shri. Satish Jarakiholi sir is so powerful and so kind towards poor people. He himself is Leader. So also he is eminent candidate for next Chief Minister of Karnataka..

  Reply
 5. Ravi patil   May 22, 2017 at 9:38 pm

  In Chikodi MP constituency give responsibilities to Prakash hukkeri sir,he was senior and famous worker ,,24*7 reachable to public and party workers..

  Reply
 6. Attack Arjun   May 22, 2017 at 10:57 pm

  This is what a common member of the party excepts a unity in our leaders if we fight like bjp then it’s an added advantage for JDS in Karnataka
  Attack Arjun

  Reply
 7. Mahaling   May 23, 2017 at 12:35 am

  Aamele ellavu bere berene aagodu

  Reply
 8. ಲಕ್ಷ್ಮಣ ಮಾಲಗಿ   May 23, 2017 at 5:38 am

  ಕಾಂಗ್ರೇಸ್ ಪಕ್ಷ ಉತ್ತಮ ತಿಮಾ೯ಣ ತೆಗೆದುಕೊಂಡಿದೆ.

  Reply
 9. ANANDRAO   May 23, 2017 at 9:53 am

  ಕಾಂಗ್ರೆಸ್ ಭಿನ್ನಮತಕ್ಕೆ ವೇಣು ಸೂತ್ರ: ಪಕ್ಷದ ಉಸ್ತುವಾರಿಗೆ ಸತೀಶ ಉತ್ತಮ ತಿಮಾ೯ಣ ತೆಗೆದುಕೊಂಡಿದೆ.ಯೋಜನೆ ಉಸ್ತುವಾರಿಗೆ ರಮೇಶ”

  Reply

Leave a Reply

Your email address will not be published.