ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಕೆಳಗಿಳಿಸಲು ಕಾಂಗ್ರೆಸ್ ಪ್ರಸ್ತಾವನೆ


ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರನ್ನು  ಕೆಳಗಿಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮತ್ತೆ ಆರಂಭಿಸಿದ್ದು, ವಿಧಾನ ಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್‍ ಮಂಗಳವಾರ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಸಲ್ಲಿಸಿದೆ.

ಕಾಂಗ್ರೆಸ್‍ನ ಪರಿಷತ್‍ ಮುಖ್ಯ ಸಚೇತಕ ಐವಾನ್‍ ಡಿಸೋಜಾ, ವಿಧಾನ ಪರಿಷತ್‍ ಸದಸ್ಯರಾದ ವಿ.ಎಸ್‍. ಉಗ್ರಪ್ಪ, ಜಬ್ಬಾರ್‍ ಖಾನ್, ಪ್ರಸನ್ನ ಕುಮಾರ್‍ ಸೇರಿ ಹಲವರು ಪರಿಷತ್‍ ಕಾರ್ಯದರ್ಶಿ ಶ್ರೀನಿವಾಸ್‍ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

75 ಸದಸ್ಯರ ಬಲದ ವಿಧಾನ ಪರಿಷತ್‍ನಲ್ಲಿ  2011ರಿಂದ ಪರಿಷತ್ ಸಭಾಪತಿಯಾಗಿ  ಡಿ.ಹೆಚ್. ಶಂಕರಮೂರ್ತಿ ಅಧಿಕಾರದಲ್ಲಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಿದ್ದರು. ಮುಂದಿನ ಸಭಾಪತಿ ಯಾರು ಎಂಬುದು ನಿಗೂಢವಾಗಿದ್ದು, ಸದ್ಯದ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

Leave a Reply

Your email address will not be published.