ವೀರ ಸಿಂಧೂರ ಲಕ್ಷ್ಮಣನ ಆದರ್ಶಗಳ ಸ್ಮರಣೆ, ಅನುಸರಣೆಯಿಂದ ನಾಡಿನ ಏಳ್ಗೆ: ಶಾಸಕ ಸತೀಶ ಜಾರಕಿಹೊಳಿ

ಹುಬ್ಬಳ್ಳಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ವೀರ ಸಿಂಧೂರ ಲಕ್ಷ್ಮಣ ಜಯಂತಿ ಉತ್ಸವ ಕಾರ್ಯಕ್ರಮವನ್ನು ಶಾಸಕ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.


ಹುಬ್ಬಳ್ಳಿಯಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಉತ್ಸವ

ಹುಬ್ಬಳ್ಳಿ: ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆಯ ಜಾತ್ಯತೀತ ಸಮಾಜ ನಿರ್ಮಿಸಲು ಶ್ರಮಿಸಿದ ಬಸವ, ಅಂಬೇಡ್ಕರ, ಸಿಂಧೂರ ಲಕ್ಷ್ಮಣ ಅವರಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ನಾಡು ಕಟ್ಟಲು ಯುವ ಜನತೆ ಕೈಜೋಡಿಸಬೇಕು ಎಂದ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಹೋರಾಟ ಸಮಿತಿ ಹುಬ್ಬಳ್ಳಿ ಗೋಕುಲ ರಸ್ತೆ ಮಂಜುನಾಥ ನಗರದ ಬಳಿಯ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಪುತ್ಥಳಿ ಬಳಿ ರವಿವಾರ ಹಮ್ಮಿಕೊಂಡಿದ್ದ  ವೀರ ಸಿಂಧೂರ ಲಕ್ಷ್ಮಣ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

 ಸ್ವಾತಂತ್ರ್ಯ ಹೋರಾಟದ ಮೂಲಕ  ವೀರ ಸಿಂಧೂರ ಲಕ್ಷ್ಮಣ  ಅವರು ಸಮಾಜಕ್ಕೊಂದು ಆದರ್ಶವಾಗಿದ್ದಾರೆ. ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದೇ ಅವರು ಸ್ವಾತಂತ್ರ್ಯಕ್ಕಾಗಿ, ನಾಡು ಕಟ್ಟುವುದಕ್ಕಾಗಿ ಅವರು ದುಡಿದಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ವೀರ ಸಿಂಧೂರ ಲಕ್ಷ್ಮಣ   ಅವರ ಆದರ್ಶಗಳು ಎಲ್ಲರಿಗೂ ಸ್ಫೂರ್ತಿ ನೀಡುವಂಥವು ಎಂದು ಅವರು ಹೇಳಿದರು.

 ದಕ್ಷಿಣ ಭಾರತದಲ್ಲಿ ನಾಯಕ ಸಮುದಾಯದ ಇತಿಹಾಸ ದೊಡ್ಡದಿದೆ. ಕೊಡುಗೆಯೂ ದೊಡ್ಡದಿದೆ. ಆಡಳಿತಗಾರರಾಗಿ, ಪಾಳೆಯಗಾರ ಅರಸರಾಗಿ, ಸೈನಿಕರಾಗಿ, ಕೋಟೆ ಕಾಯುವ ನಿಯತ್ತಿನವರಾಗಿ, ರಾಜ್ಯಾಡಳಿತದ ಸಲಹೆಗಾರರಾಗಿ, ಸಂಘಟಕರಾಗಿ,  ಸಾಮಾಜಿಕ, ಧಾರ್ಮಿಕ ನೇತಾರರಾಗಿ ದಕ್ಷಿಣ ಭಾರತದ ಉದ್ದಗಲಕ್ಕೂ ಅವರು ಇತಿಹಾಸ ನಿರ್ಮಿಸಿದ್ದಾರೆ.  ದಕ್ಷಿಣ ಭಾರತದಲ್ಲಿ ನಿರ್ಮಾಣವಾದ ಕೋಟೆಗಳು ನಾಯಕರ  ಆಡಳಿತ ಕಾಲದ ಕಥೆ ಹೇಳುತ್ತವೆ. ಮದಕರಿ ನಾಯಕ, ರಾಮಸ್ವಾಮಿ ನಾಯಕ ಹೀಗೆ ನಾಯಕ ಸಮುದಾಯದ ಅನೇಕರು ನಾಡಿನ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ, ಚಿತ್ರದುರ್ಗದ ಕೋಟೆ,  ಮರುಘಾಮಠ, ಮಧುರೈ ಮೀನಾಕ್ಷಿ ದೇವಸ್ಥಾನ, ತಮಿಳುನಾಡು, ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿರುವ ಕೋಟೆ ಕೊತ್ತಲಗಳು ನಾಯಕ ಸಮುದಾಯದ ಕರ್ತವ್ಯಕ್ಕೆ  ಸಾಕ್ಷಿ ಹೇಳುತ್ತವೆ ಎಂದು ಇತಿಹಾಸದ ವೈಭವವನ್ನು ಬಿಚ್ಚಿಟ್ಟ ಶಾಸಕ ಸತೀಶ ಜಾರಕಿಹೊಳಿ,  ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು ಎನ್ನುವ ಮಾತು ಅರಿತು ಮುಂದುವರಿಯಬೇಕಿದೆ ಎಂದು ಯವಜನತೆಗೆ ಕಿವಿಮಾತು ಹೇಳಿದರು.

 ವೀರ ಸಿಂಧೂರ ಲಕ್ಷ್ಮಣನ ಆದರ್ಶಗಳ ನೆನಪು ಹುಬ್ಬಳ್ಳಿಗಷ್ಟೇ ಸೀಮಿತವಾಗಬಾರದು. ನಾಡಿನ ಉದ್ದಗಲಕ್ಕೂ ಅದು ಹರಡಬೇಕು ಎಂದು ಅಭಿಪ್ರಾಯಪಟ್ಟ ಅವರು, ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ. ಸಂವಿಧಾನ ನೀಡಿದ ಹಕ್ಕು ಪಡೆಯಲು ನಾಯಕ ಸಮುದಾಯವೂ ಸೇರಿ ಎಲ್ಲ ಜನರೂ ಮುಂದಾಗಬೇಕು, ನಿರುದ್ಯೋಗಕ್ಕೆ ಬೈ ಹೇಳಿ ಉದ್ಯಮಿಗಳಾಗಿ, ನೀವು ಬಯಸಿದಂತೆ ಆಗಲು ಪ್ರಯತ್ನಿಸಿ, ದೇಶದ ಬದಲಾವಣೆಗೆ ಮುನ್ನುಗ್ಗಿ  ಎಂದರು.

 ಮದಕರಿ ಜನಾಂಗದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಸತೀಶ ಅವರನ್ನು ಸನ್ಮಾನಿಸಲಾಯಿತು.

 ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರದೀಪ ಶೆಟ್ಟರ್, ಶಾಸಕ ಶ್ರೀನಿವಾಸ ಮಾನೆ, ಮಹಾಪೌರ ಡಿ.ಕೆ.ಚವ್ಹಾಣ,  ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ, ಬಿಜೆಪಿ ಧುರೀಣ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿದ್ದರು.

 ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಚಂದ್ರಶೇಖರ ಜುಟ್ಟಲ ಉಪನ್ಯಾಸ ನೀಡಿದರು.

7 Responses to "ವೀರ ಸಿಂಧೂರ ಲಕ್ಷ್ಮಣನ ಆದರ್ಶಗಳ ಸ್ಮರಣೆ, ಅನುಸರಣೆಯಿಂದ ನಾಡಿನ ಏಳ್ಗೆ: ಶಾಸಕ ಸತೀಶ ಜಾರಕಿಹೊಳಿ"

 1. Balappa   May 28, 2017 at 6:27 pm

  Sindur Laxman adduri cinema product aaga beku n. Vanshastarige sarakar n samajad kelasu aaga beku

  Reply
 2. Balappa nari   May 28, 2017 at 6:39 pm

  ಸಿಂಧುರ ಲಕ್ಷ್ಮಣ ಇವರ ವಂಶಸ್ಥ ರಿ ಗೆ ಸರಕಾರ ಮತ್ತು ಸಮಾಜ ದಿ ಂದ ಪೋತ್ಸಾಹ ನೀಡುವುದು.

  Reply
 3. shaniea   May 29, 2017 at 2:09 am

  A mio parere, si sono errati. Sono in grado di provarlo. Scrivere a me in PM, discuterne.
  shaniea

  Reply
 4. Tyncmuff   June 9, 2017 at 12:08 am

  In my opinion you are not right. I can prove it. Write to me in PM, we will discuss.
  http://rexuiz.top/
  http://rexuiz.top/
  https://twitter.com/top_choise
  http://www.notbred.com/

  Reply
 5. DiopRott   July 7, 2017 at 6:10 pm

  Hello my loved one! I want to say that this article is amazing, great written and come with approximately all vital infos. I would like to see more posts like this.
  http://tomau0j.tumblr.com/
  http://noreferer.win/
  http://choisetop.tumblr.com/
  http://www.sexybang.top/gal/1977.html

  Reply
 6. DiopRott   July 20, 2017 at 1:46 pm

  Excuse, that I interrupt you, but it is necessary for me little bit more information.
  http://thegvision.com/forum/index.php?topic=90350.new#new
  http://www.sexybang.top/
  http://www.sexybang.top/gal/1607.html
  http://grishanovets59ig.tumblr.com/

  Reply

Leave a Reply

Your email address will not be published.