ಕಾಂಗ್ರೆಸ್ ಸರ್ಕಾರ ಸಾಮಾನ್ಯರ ಹಾಗೂ ಅಭಿವೃದ್ಧಿಪರ ಸರ್ಕಾರ- ಶಾಸಕ ರಾಘವೇಂದ್ರ ಹಿಟ್ನಾಳ


ಕೊಪ್ಪಳ: ನಗರವನ್ನು ಸ್ವಚ್ಛ, ಸುಂದರ  ಹಾಗೂ ಜನರಿಗೆ ಯಾವುದೇ ರೀತಿಯ ಸಂಚಾರ ಹಾಗೂ ಆರೋಗ್ಯ ಸಮಸ್ಯೆಗಳು ಕಾಡದಂತೆ ದೂರವಿಡಲು ಸಿಮೆಂಟ್ ರಸ್ತೆ ಸಹಾಯಕಾರಿಯಾಗಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಮ್ಮ ತಾಲೂಕಿನಲ್ಲಿ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಮಾಡುತ್ತಿದ್ದೇವೆ ಪ್ರತಿ ಗ್ರಾಮ, ಪಟ್ಟಣಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ನಮ್ಮ ಕಾಂಗ್ರೆಸ್ ಸರಕಾರ ಸಾಮಾನ್ಯರ ಹಾಗೂ ಅಭಿವೃದ್ಧಿಪರ ಸರಕಾರವಾಗಿದೆ ಎಂದು ಹೇಳಿದರು . ನಗರದ 20ನೇ ವಾರ್ಡಿನಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಸಂದಭ೯ದಲ್ಲಿ ಜಿ.ಪಂ.ಸದಸ್ಯ ರಾಜಶೇಖರ ಹಿಟ್ನಾಳ, ನಗರಸಭೆ ಸದಸ್ಯರಾದ ಗವಿಸಿದ್ದಪ್ಪ ಚಿನ್ನುರು, ಮಂಜುನಾಥ ದಿವಟರ್, ವಿರುಪಣ್ಣ ಕೆಂಗಾರಿ,  ಮುಖಂಡರಾದ ಹಾಜಿ ಹುಸೇನ್. ರಮೇಶ ಉಮಚಗಿ,  ಪಂಪಾವತಿ ಮತ್ತು ಇತರರು ಇದ್ದರು.

Leave a Reply

Your email address will not be published.