ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಲ.ಕೋಲಕಾರಗೆ ಮಯೂರ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರಿನ ನಯನ ರಂಗಮಂದಿರದಲ್ಲಿ ಮೇ.28ರಂದು ಹಮ್ಮಿಕೊಂಡಿದ್ದ ಡಾ.ಶಿವರಾಮ ಕಾರಂತ ರಾಷ್ಟ್ರೀಯ ಕಲಾ ಪ್ರತಿಭೋತ್ಸವದಲ್ಲಿ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಅವರಿಗೆ ಪ್ರಶಸ್ತಿ, ಫಲಕ ನೀಡಿ ಗೌರವಿಸಲಾಯಿತು.


ಬೆಳಗಾವಿ: ಇಲ್ಲಿಯ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಲ.ಕೋಲಕಾರ ಅವರಿಗೆ ಬೆಂಗಳೂರಿನ ಸುರ್ವೇ ಕಲ್ಚರಲ್ ಅಕಾಡೆಮಿಯ ಮಯೂರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕ ಸರ್ಕಾರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಮೇ.28ರಂದು  ಹಮ್ಮಿಕೊಂಡಿದ್ದ ಡಾ.ಶಿವರಾಮ ಕಾರಂತ ರಾಷ್ಟ್ರೀಯ ಕಲಾ ಪ್ರತಿಭೋತ್ಸವದಲ್ಲಿ ಯಲ್ಲಪ್ಪ ಅವರಿಗೆ ಪ್ರಶಸ್ತಿ, ಫಲಕ ನೀಡಿ ಗೌರವಿಸಲಾಯಿತು.

 ಕರ್ನಾಟಕದ ನೆಲ, ಜಲ, ಭಾಷೆ, ಜನ ಜೀವನಗಳ ಬಗ್ಗೆ ಕಾಳಜಿ ಇಟ್ಟು, ನಿಸ್ವಾರ್ಥದಿಂದ ಸಮಾಜಕ್ಕೆ ಸಲ್ಲಿಸಿದ ಸೇವೆ ಮತ್ತು ಸಾಧನೆ ಪರಿಗಣಿಸಿ ಸುರ್ವೇ ಕಲ್ಚರಲ್ ಅಕಾಡೆಮಿಯ ಮಯೂರ ರಾಜ್ಯ ಪ್ರಶಸ್ತಿ ನೀಡಲಾಗಿದೆ.

ದಾವಣಗೆರೆ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಮಾಜಿ ಸಚಿವ ರಾಮಚಂದ್ರಗೌಡ, ಬಿಬಿಎಂಪಿ ಸದಸ್ಯೆ ಜಿ.ಪದ್ಮಾವತಿ, ನಿವೃತ್ತ ಅಧಿಕಾರಿ ಸಿ.ಸೋಮಶೇಖರ, ಸಾಹಿತಿ ಕವಿತಾ ಕೃಷ್ಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಕರ್ನಾಟಕ ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಕಲ್ಮೇಶ್ವರ ಸ್ವಾಮೀಜಿ,  ಚಲನಚಿತ್ರ ನಟ ಬ್ಯಾಂಕ್ ಜನಾರ್ದನ, ನಟಿ ಮೀನಾ, ಸುರ್ವೇ ಕಲ್ಚರಲ್ ಅಕಾಡೆಮಿ ಸ್ಥಾಪಕ ರಮೇಶ ಸುರ್ವೇ, ಅಧ್ಯಕ್ಷ ದೇವೇಂದ್ರಕುಮಾರ ನಿಗಡೆ, ಕಿಶನ್ ಸುರ್ವೇ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಬೆಳಗಾವಿಯ ಶಹಾಪುರ ಮತ್ತು ಹಲವು ಕಡೆಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಯಲ್ಲಪ್ಪ ಲ.ಕೋಲಕಾರ ಅವರು ಬುದ್ಧ, ಬಸವ ಮತ್ತು  ಡಾ.ಬಿ.ಆರ್.ಅಂಬೇಡ್ಕರ ಅಭಿಮಾನಿ ಬಳಗದ ಮುಂಚೂಣಿ ನಾಯಕರಾಗಿಯೂ ಜನ ಪ್ರೀತಿ ಸಂಪಾದಿಸಿದ್ದಾರೆ.  ಬೆಳಗಾವಿ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸದಲ್ಲಿರುವ ಯಲ್ಲಪ್ಪ,  ಸರ್ಕಾರಿ ಕೆಲಸದ ಜೊತೆಗೆ ಸಮಾಜ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ವಿಶೇಷ.

Leave a Reply

Your email address will not be published.