ಡಾ.ರಾಜ್ ಆಸೆಯಂತೆ ಪಾರ್ವತಮ್ಮ ರಾಜಕುಮಾರ ನೇತ್ರದಾನ


ಕಣ್ಣಾದರು ಪಾರ್ವತಮ್ಮರಾಜಕುಮಾರ್

ಬೆಂಗಳೂರು: ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯಮ್ಮ ಪಾರ್ವತಮ್ಮ ರಾಜ್ ಕುಮಾರ್ ಅವರ ಎರಡೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.

ಡಾ.ರಾಜ್ ಕುಮಾರ್ ಅವರ ಆಸೆಯಂತೆ ಪಾರ್ವತಮ್ಮ ರಾಜ್ ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಡಾ.ರಾಜ್ ಕುಮಾರ್ ಕೂಡ ಕಣ್ಣು ದಾನ ಮಾಡಿದ್ದರು. ನಾರಾಯಣ ನೇತ್ರಾಲಯದ ವೈದ್ಯರಾದ ಡಾ.ಭುಜಂಗ  ಶೆಟ್ಟಿ ಅವರು ಪಾರ್ವತಮ್ಮ ಅವರ ಸದಾಶಿವನಗರ ನಿವಾಸಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದರು.

Leave a Reply

Your email address will not be published.