1993 ಮುಂಬೈ ಬಾಂಬ್ ಬ್ಲಾಸ್ಟ್ ಮಾಸ್ಟರ್ ಮೈಂಡ್ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು

ಮುಸ್ತಫಾ ದೋಸ್ಸಾ
 

ಮುಂಬೈ: 1993 ಮುಂಬೈ ಸರಣಿ ಬಾಂಬ್ ಸ್ಪೋಟ್ ಮಾಸ್ಟರ್ ಮೈಂಡ್  ಮುಸ್ತಫಾ ದೋಸ್ಸಾ ಅನಾರೋಗ್ಯದಿಂದ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾನೆ. 

 
ಆರ್ಥೂರ ಕಾರಾಗೃಹದಲ್ಲಿದ್ದ   ಮುಸ್ತಪಾ ದೋಸ್ಸಾ ಎದೆನೋವಿನಿಂದ ಬಳಲುತ್ತಿದ್ದ, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
1993ರ ಮುಂಬಯಿ ಸರಣಿ ಸ್ಫೋಟ  ಪ್ರಕರಣದಲ್ಲಿ ತಪ್ಪಿತಸ್ಥ  ಎಂದು  ಟಾಡಾ ಕೋರ್ಟ್ ಇತ್ತಿಚೀಗೆ ತೀರ್ಪು ನೀಡಿತ್ತು, 
ಹೈಪರ್ ಟೆನ್ಸನ್ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. 
 
ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ದೊಸ್ಸಾಗೆ  ಗಲ್ಲು ಶಿಕ್ಷೆ ನೀಡಬೇಕೆಂದು ಕೋರಿ ಮಂಗಳವಾರ ಸಿಬಿಐ ಮನವಿ ಸಲ್ಲಿಸಿತ್ತು. 
 
1993ರ ಮಾರ್ಚ್ 12ರಂದು ನಡೆದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟು, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು. ರು. 27 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿತ್ತು.
 

One Response to "1993 ಮುಂಬೈ ಬಾಂಬ್ ಬ್ಲಾಸ್ಟ್ ಮಾಸ್ಟರ್ ಮೈಂಡ್ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು"

  1. SiennaX   July 2, 2017 at 12:30 pm

    I must say you have very interesting posts here. Your content can go viral.
    You need initial boost only. How to get massive traffic?
    Search for; Murgrabia’s tools go viral

    Reply

Leave a Reply

Your email address will not be published.