ಮಹಾರಾಷ್ಟ್ರ ಪರ ಘೋಷಣೆ, ವಾಟಾಳ್ ವಿರುದ್ಧ ಕಿಡಿ: ಎಂಇಎಸ್ ಪುಂಡಾಟಿಕೆ ಮುಂದುವರಿಕೆ


 ಬೆಳಗಾವಿ: ಗಡಿ ಭಾಗದ ಮರಾಠಿಗರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡಿದೆ. ಸರ್ಕಾರಕ್ಕೆ ಬುದ್ಧಿ ಕಲಿಸಲು ಮರಾಠಿ ಭಾಷಿಕ ಮಹಿಳೆಯರು ಕೈಯಲ್ಲಿ ಖಡ್ಗ ಹಿಡಿದು ಹೋರಾಟ ಮಾಡಬೇಕು ಎಂದು  ಎಂಇಎಸ್ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಪಾಟೀಲ, ಮತ್ತೊಮ್ಮೆ ಮರಾಠಿಗರನ್ನು ಪ್ರಚೋದಿಸಿ ಗುರುವಾರ ಹೇಳಿಕೆ ನೀಡಿದ್ದಾರೆ.

ಹಿಂಡಲಗಾ ಗ್ರಾಮದ ಹುತಾತ್ಮ ಸ್ಮಾರಕದ ಬಳಿ ಹುತಾತ್ಮರಿಗೆ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಎಂಈಎಸ್ ಮುಖಂಡರಾದ  ಟಿ.ಕೆ.ಪಾಟೀಲ ಮತ್ತು ಶಾಸಕ ಅರವಿಂದ ಪಾಟೀಲ ಮಾತನಾಡಿ,  ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬಾರದಂತೆ  ಕರ್ನಾಟಕ ಸರ್ಕಾರ ತಡೆದಿದೆ.  ಆದರೆ ವಾಟಾಳ್ ನಾಗರಾಜ್ ಅವರಂಥವರು ಬೆಳಗಾವಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವುದನ್ನು ತಡೆದಿಲ್ಲ. ಜೂನ್ 12ರಂದು ಕರ್ನಾಟಕ ಬಂದ್ ಮಾಡುವ ಹೇಳಿಕೆ ನೀಡುವುದನ್ನು ತಡೆದಿಲ್ಲ.  ಬೆಳಗಾವಿಗೆ ಬರಲು ವಾಟಾಳ್ ಗೆ ಅನುಮತಿ ಕೊಟ್ಟದ್ದು ಸರಿಯಲ್ಲ. ಮರಾಠಿಗರಿಗೊಂದು, ಕರ್ನಾಟಕದವರಿಗೊಂದು ನೀತಿ ಅನುಸರಿಸಲಾಗುತ್ತಿದೆ ಎಂದು ಕಿಡಿ ಕಾರಿದರು. ಮರಾಠಿಗರು ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದರು. ಮತ್ತೆ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಮುಖಂಡರು ಉದ್ಧಟತನ ಪ್ರದರ್ಶಿಸಿದರು.

Leave a Reply

Your email address will not be published.