ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ತವರಿಗೆ: ನೆದರ್‌ಲ್ಯಾಂಡ್‌ನಲ್ಲಿ ಸೈಕಲ್ ಕಾಣಿಕೆ

ನೆದರ್‌ಲ್ಯಾಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ ಮತ್ತು ಕಾಣಿಕೆ ನೀಡಿದ ಸೈಕಲ್ ಜತೆಗೆ ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ: ಮೂರು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ಸ್ವದೇಶಕ್ಕೆ ಮರಳಿದ್ದಾರೆ.  ಪ್ರಧಾನಿ ಮೋದಿ ಅವರಿಗೆ ನೆದರ್‌ಲ್ಯಾಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ  ಸೈಕಲ್‌ ಕಾಣಿಕೆ ನೀಡಿದ್ದು, ಮೋದಿ ಈ ಕಾಣಿಕೆಗೆ ಧನ್ಯವಾದ ಹೇಳಿದ್ದಾರೆ.

ಮೊದಲಿಗೆ ಪೋರ್ಚುಗಲ್ ನಂತರ ಅಮೆರಿಕಾ, ನೆದರ್‌ಲ್ಯಾಂಡ್‌ ದೇಶಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾರತದಿಂದ  ಜೂನ್ 24ರಂದು ತೆರಳಿದ್ದರು. ಪೋರ್ಚುಗಲ್‌ ನಂತರ ಅಮೆರಿಕಾಗೆ ತೆರಳಿದ್ದ ಪ್ರಧಾನಿ ಎರಡು ದಿನ ಅಮೆರಿಕಾದಲ್ಲಿದ್ದರು. 27ರಂದು ನೆದರ್‌ಲ್ಯಾಂಡ್‌ಗೆ ತೆರಳಿದ್ದರು. ನೆದರ್‌ಲ್ಯಾಂಡ್‌ ನಿಂದ ಬುಧವಾರ ತವರಿಗೆ ಬಂದಿದ್ದಾರೆ.

ಪ್ರಧಾನಿ ಮೋದಿ ತಮ್ಮ ಪ್ರವಾಸದ ವೇಳೆ ಮೂರು ರಾಷ್ಟ್ರಗಳ ಜೊತೆ ಹಲವು ಪ್ರಮುಖ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ.

Leave a Reply

Your email address will not be published.