ಹೊಸದಿಲ್ಲಿ: ಚಹಾ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಐವರ ಸಾವು


ಹೊಸದಿಲ್ಲಿ: ಇಲ್ಲಿನ ಓಖ್ಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ  ಸೋಮವಾರ ಬೆಳಗ್ಗೆ ಅನಿಲ ಸೋರಿಕೆಯಾಗಿ  ಸಿಲಿಂಡರ್  ಸ್ಫೋಟಗೊಂಡಿದ್ದು, 5 ವರ್ಷದ ಬಾಲಕಿ ಸೇರಿ ಐವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಕೈಗೊಂಡರು. ಆದರೆ ಅಷ್ಟರಲ್ಲಿ ಅಂಗಡಿಯಲ್ಲಿನ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡು ಸುತ್ತಮುತ್ತಲಿನ ಪ್ರದೇಶಕ್ಕೂ ವ್ಯಾಪಿಸಿತ್ತು. ಅಗ್ನಿ ಆಕಸ್ಮಿಕದಲ್ಲಿ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಹಾನಿಯಾಗಿದೆ.

Leave a Reply

Your email address will not be published.