ಮುಸ್ಲಿಂ ವ್ಯಕ್ತಿ ಮನೆ ಮುಂದೆ ಸತ್ತ ಹಸು ಪತ್ತೆ: ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿದ ಸ್ಥಳೀಯರು

 

ಗಿರಿದಿಹ್ (ಜಾರ್ಖಂಡ್): ಮುಸ್ಲಿಂ ವ್ಯಕ್ತಿ ಮನೆ ಮುಂದೆ ಸತ್ತ ಹಸುವೊಂದು ಪತ್ತೆಯಾದ ಹಿನ್ನಲೆಯಲ್ಲಿ  ಗೋಹತ್ಯೆ ಮಾಡಿದ್ದಾನೆಂದು ಶಂಕಿಸಿ ಮನೆಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್ ರಾಜ್ಯದ ಗಿರಿದಹ್ ಜಿಲ್ಲೆಯ ಬೇರಿಯಾ ಗ್ರಾಮದಲ್ಲಿ  ನಡೆದಿದೆ.

 
ಬುಧವಾರ ಬೇರಿಯಾ ಗ್ರಾಮದ ನಿವಾಸಿ ಉಸ್ಮಾನ್ ಅನ್ಸಾರಿ ಮನೆ ಮುಂದೆ ಸತ್ತ ಹಸುವೊಂದನ್ನು ಕಂಡ ಕೆಲ ಸ್ಥಳೀಯರು ಆತನೇ ಹಸುವನ್ನು ಕೊಂದಿದ್ದಾನೆಂದು ಅವನ ಮೇಲೆ ಮಾರಣಾಂತಿಕ  ಹಲ್ಲೆ ನಡೆಸಿದ್ದು, ಆತನ ಮನೆಗೆ ಬೆಂಕಿ ಹಚ್ಚಿದ್ದಾರೆ.
 
ಉಸ್ಮಾನ್ ಮೇಲೆ ದಾಳಿ ನಡೆಸಿದ ಕೆಲವೇ ನಿಮಿಷಗಳಲ್ಲಿ ಜನರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ದಾಳಿಕೋರರಿಂದ ಉಸ್ಮಾನ್ ಹಾಗೂ ಆತನ ಕುಟುಂಬಸ್ಥರನ್ನು ರಕ್ಷಣೆ ಮಾಡಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ. ಹಲ್ಲೆಗೊಳಗಾಗಿರುವ ಉಸ್ಮಾನ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 
 
ಘಟನೆಗೆ ಜಾರ್ಖಾಂಡ್ ನ ಹಲವೆಡೆ ವಿರೋಧ ವ್ಯಕ್ತವಾಗುತ್ತಿದ್ದು ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಘರ್ಷಣೆಯನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಉದ್ರಿಕ್ತರನ್ನು ಚದುರಿಸಿದ್ದಾರೆಂದು ವರದಿಗಳು ತಿಳಿಸಿವೆ. 
 
 
Source: ANI
 

Leave a Reply

Your email address will not be published.