ಗಾಂಧಿ ಸಮಾಧಿಗೆ ನಮಿಸಿ ರಾಷ್ಟ್ರಪತಿ ಚುನಾವಣೆಗೆ ಮೀರಾಕುಮಾರ ನಾಮಪತ್ರ

ಲೋಕಸಭಾ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸುತ್ತಿರುವ ಮೀರಾಕುಮಾರ.
 

ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.  
ಬುಧವಾರ ಬೆಳಗ್ಗೆ ಪಾರ್ಲಿಮೆಂಟ್ ಹೌಸ್‌ಗೆ ಬಂದು ಮೀರಾ ಕುಮಾರ್‌, ಇಲ್ಲಿನ ಲೋಕಸಭಾ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಿದರು.

 
ಮೀರಾ ಕುಮಾರ್‌ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌‌ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಎನ್‌ಸಿಪಿ ಮುಖಂಡ ಶರದ್‌ ಪವಾರ್‌, ಸಿಪಿಎಂ ಮುಖಂಡ ಸೀತರಾಂ ಯೆಚೂರಿ, ಮುಖ್ಯಮಂತ್ರಿ  ಸಿದ್ದರಾಮಯ್ಯ, ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ಹಾಗೂ ಮತ್ತಿತರ ಹಿರಿಯ ಮುಖಂಡರು ಇದ್ದರು.
 

Leave a Reply

Your email address will not be published.