ರಾಷ್ಟ್ರಪತಿ ಚುನಾವಣೆ: ಮೀರಾ ಕುಮಾರರಿಂದ ಇಂದು ನಾಮಪತ್ರ ಸಲ್ಲಿಕೆ

 
 
 
 
ಮಾಜಿ ಲೋಕಸಭೆ ಸ್ಪೀಕರ್ ಮೀರಾ ಕುಮಾರ

ಹೊಸದಿಲ್ಲಿ:   ಯುಪಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಜಿ ಲೋಕಸಭೆ ಸ್ಪೀಕರ ಮೀರಾ ಕುಮಾರ  ಇಂದು ಬೆಳಿಗ್ಗೆ 11.30 ಗಂಟೆಗೆ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. 

 
ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದೆ.  
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ ಸೇರಿದಂತೆ ಪ್ರತಿಪಕ್ಷಗಳ ನಾಯಕರ ನೇತೃತ್ವದಲ್ಲಿ ಮೀರಾ ಕುಮಾರ್ ಅವರು ನಾಮಪತ್ರ ನೀಡಲಿದ್ದಾರೆ. 
 
ಇದೂವರೆಗೆ 24 ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಕೋವಿಂದ್ ಹೊರತುಪಡಿಸಿ ಉಳಿದವರ ನಾಮಪತ್ರಕ್ಕೆ ಸೂಚಕರೇ ಇಲ್ಲದ ಕಾರಣ ಎಲ್ಲವೂ ತಿರಸ್ಕೃತವಾಗಲಿವೆ ಎಂದು ಹೇಳಲಾಗುತ್ತಿದೆ. 
 

Source: ANI

 

Leave a Reply

Your email address will not be published.