ಲೈಂಗಿಕ ಕಿರುಕುಳ: ಅತ್ಯಾಚಾರ ಪ್ರತಿರೋಧಿಸಿದ ಯುವತಿಯನ್ನು ಸುಟ್ಟು ಹಾಕಿದ ಕಾಮುಕ


ಉತ್ತರ ಪ್ರದೇಶ: ಇಲ್ಲಿಯ ಶಹಿಗನೇಶ್ಪುರ್‍ದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಯುವತಿಯೊಬ್ಬಳ  ಮೇಲೆ   ನೆರೆಮನೆಯ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದು,  ಯುವತಿ ಇದಕ್ಕೆ  ಪ್ರತಿರೋಧಿಸಿದಾಗ ಅವಳನ್ನು ಜೀವಂತ ದಹನ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹರೀಮ್ ಎಂಬಾತ ಕೃತ್ಯ ಎಸಗಿದವನು. ಮೊಬೈಲ್ ಚಾರ್ಜರ್‍ ಕೆಳುವ ನೆಪದಲ್ಲಿ ಯುವತಿ ಮನೆಗೆ ತೆರಳಿದ ಈತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧಿಸಿ ಯುವತಿ ಆತನಿಗೆ ಥಳಿಸಿದ್ದಾಳೆ. ಇದರಿಂದ  ಕುಪಿತಗೊಂಡು ಯುವತಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಂಚಿದ್ದಾನೆ. ಗಾಯಗೊಂಡ ಯುವತಿಯನ್ನು ಕುಟುಂಬಸ್ಥರು ಆಸ್ಪತ್ರಗೆ ಸಾಗಿಸಲಾಗತ್ತಾದರು ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ.

ಈ ಕುರಿತು ಖವಾಟಿ ಗಾರ್ಗ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published.