ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಪಂದ್ಯ ಗೆದ್ದ ಸಂಭ್ರಮದಲ್ಲಿ ಭಾರತ ತಂಡದ ನಾಯಕ ಕೊಹ್ಲಿ ಮತ್ತು ಆಟಗಾರರು.

ಗಾಲೆ: ಶ್ರೀಲಂಕಾ ವಿರುದ್ಧದ  ಟೆಸ್ಟ್  ಸರಣಿಯಲ್ಲಿ ಭಾರತ ತಂಡ ಮೊದಲ ಟೆಸ್ಟ್ ನಲ್ಲಿ 304 ರನ್ ಗಳಿಂದ ಭರ್ಜರಿ ಜಯ  ಸಾಧಿಸಿದೆ.

ಟಾಸ್ ಗೆದ್ದು ಇನ್ನಿಂಗ್ಸ್ ಪ್ರಾರಂಭಿಸಿದ್ದ ಭಾರತ ತಂಡ 600 ರನ್ ಗಳಿಗೆ ಸರ್ವಪತನಗೊಂಡಿತ್ತು.  ನಂತರ ಇನ್ನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ 291 ರನ್ ಗಳಿಗೆ ಸರ್ವಪತನ ಆಗಿತ್ತು. 309 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಡಿಕ್ಲೇರ್ ಘೊಷಿಸಿ  ಶ್ರೀಲಂಕಾಗೆ 550 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತ್ತು.

550 ರನ್ ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾಗೆ ಕರುಣಾರತ್ನೆ ಮತ್ತು ಡಿಕ್ವೆಲ್ಲಾ ಅವರು ಉತ್ತಮವಾಗಿ ಆಡಿದರು. ಇತರೆ ಆಟಗಾರರ ವೈಫಲ್ಯದ ಕಾರಣ ಶ್ರೀಲಂಕಾ 245 ರನ್ ಗಳಿಗೆ ಸರ್ವಪತ ಕಂಡು ಸೋಲು ಅನುಭವಿಸಿತು.

ಗಾಲೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 550 ರನ್ ಗಳ ಗುರಿ ಪಡೆದಿದ್ದ ಶ್ರೀಲಂಕಾ 245 ರನ್ ಗಳಿಗೆ ಸರ್ವಪತನ ಕಂಡಿದ್ದು 304 ರನ್ ಗಳಿಂದ ಟೀಂ ಇಂಡಿಯಾಗೆ ಶರಣಾಗಿದೆ.

ಭಾರತ ಪರ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಕಿತ್ತು ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನು ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಪಂದ್ಯ ಗೆದ್ದಿದೆ. ಶಿಖರ್ ಧವನ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

Leave a Reply

Your email address will not be published.