ಐಸಿಸಿ ಮಹಿಳಾ ವಿಶ್ವಕಪ್‌: ಭಾರತೀಯ ವನಿತೆಯರ ಎದುರು ಇಂಗ್ಲೆಂಡ್ ಪರದಾಟ


ಲಾರ್ಡ್ಸ್‌: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ  ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್‌ ಆಯ್ದುಕೊಂಡಿದ್ದು,44 ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಆಟವಾಡುತ್ತಿದೆ.  ಕನ್ನಡತಿ ರಾಜೇಶ್ವರಿ ಗಾಯಕವಾಡ 11ನೇ ಓವರ್ ನಲ್ಲಿ ಇಂಗ್ಲೆಂಡ್ ತಂಡದ ಮೊದಲ ವಿಕೆಟ್ ಪಡೆದರಲ್ಲದೇ, ಭಾರತೀಯ ವನಿತೆಯರ  ಮಾರಕ ಬೌಲಿಂಗ್ ದಾಳಿಯನ್ನು ಪರಿಚಯಿಸಿದರು.

ಇಂಗ್ಲೆಂಡ್‌ ಮೊದಲ 10 ಓವರ್‌ನಲ್ಲಿ 43ರನ್‌ಗಳಿಸಿತು.  11ನೇ ಓವರ್‌ನಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್‌ವಾಡ್‌‌ ಇಂಗ್ಲೆಂಡ್‌ ತಂಡದ ಮೊದಲ ವಿಕೆಟ್ ಪಡೆದರು. ಕಾಲಿನಡಿ ಬಂದ ಚೆಂಡು ಗುರುತಿಸಲಾಗದೇ ಲೂರೆನ್ ವಿನ್ ಫಿಲ್ಡ್ ವಿಕೆಟ್ ಒಪ್ಪಿಸಿ ಹೊರನಡೆದರು.

ಸ್ಪಿನ್ನರ್ ಪೂನಮ್ ಯಾದವ 15ನೇ ಓವರ್ ನಲ್ಲಿ  ಟ್ಯಾಮಿ ಬ್ಯೂಯೊಮೌಂಟ್ ವಿಕೆಟ್ ಪಡೆದರು. ಆಗ ಇಂಗ್ಲೆಂಡ್ ಸ್ಕೋರ್ 2 ವಿಕೆಟ್ ನಷ್ಟಕ್ಕೆ  60 ರನ್ ಆಗಿತ್ತು. ಜುಲಾನ್ ಗೋಸ್ವಾಮಿ 33ನೇ ಓವರ್ ನ  ಎರಡು ಬಾಲ್ ಗಳಲ್ಲಿ 2 ವಿಕೆಟ್ ತೆಗೆದಾಗ ಇಂಗ್ಲೆಂಡ್ ಆಟಗಾರರು ಬೆಚ್ಚಿ ಬಿದ್ದರು.
12 ವರ್ಷದ ಬಳಿಕ ಇದೇ ಮೊದಲ ಬಾರಿ ಭಾರತ ಮಹಿಳಾ ತಂಡ ಫೈನಲ್‌ ತಲುಪಿದ್ದು ಪಂದ್ಯ ಕುತೂಹಲ ಕೆರಳಿಸಿದೆ.

Leave a Reply

Your email address will not be published.