ಐಸಿಸಿ ಮಹಿಳಾ ವಿಶ್ವಕಪ್: ಭಾರತ ತಂಡದ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಳಿಸಿದ ಇಂಗ್ಲೆಂಡ್

ದೀಪಾಲಿ ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಗ್ಲೆಂಡ್ ಆಟಗಾರರು.

ಗೆಲುವಿನ ಹೊಸ್ತಿಲಲ್ಲಿದ್ದ ಪಂದ್ಯವನ್ನು ಕೈಚೆಲ್ಲಿದ ಭಾರತದ ವನಿತೆಯರು

ಲಂಡನ್‌:  ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತ ಮಹಿಳಾ ತಂಡ ಗೆಲುವಿನ ಹೊಸ್ತಿಲಲ್ಲಿ ಮ್ಯಾಚ್‌ ಕೈಚೆಲ್ಲಿದರ ಪರಿಣಾಮ ಇಂಗ್ಲೆಂಡ್‌ ತಂಡ ಮತ್ತೊಮ್ಮೆ ವಿಶ್ವಕಪ್‌ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದರಿಂದ ಭಾರತದ ಚೊಚ್ಚಲ ವಿಶ್ವಕಪ್‌ ಪ್ರಶಸ್ತಿಯ ಕನಸು ಭಗ್ನಗೊಂಡಿದೆ.ಕ್ರಿಕೆಟ್‌ ಕಾಶಿ ಲಾರ್ಡ್ಸ್‌‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೂರು ಸಲ ವಿಶ್ವಕಪ್‌ ಚಾಂಪಿಯನ್‌‌ ತಂಡ ಇಂಗ್ಲೆಂಡ್‌ ವಿರುದ್ಧ ಸೋತ ಭಾರತ ನಿರಾಸೆಗೆ ಒಳಗಾಗಿದ್ದು, ಇದರಿಂದ ಮಿಥಾಲಿ ರಾಜ್‌ ನೇತೃತ್ವದ ಮಹಿಳಾ ತಂಡ ಚೊಚ್ಚಲ ವಿಶ್ವಕಪ್‌ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಭಗ್ನಗೊಂಡು ನಿರಾಶೆಗೆ ಒಳಗಾಗಿದೆ.

 ಇಂಗ್ಲೆಂಡ್ ನೀಡಿದ್ದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಮಿಥಾಲಿ ರಾಜ್ ಪಡೆ ಕೇವಲ 219 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು.
 
ಚೊಚ್ಚಲ ವಿಶ್ವಕಪ್‌ ಗೆಲ್ಲುವ ಮಹದಾಸೆಯೊಂದಿಗೆ ಕಣಕ್ಕಿಳಿದ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತಾದರೂ, ಇಂಗ್ಲೆಂಡ್ ಪ್ರಭಾವಿ ಬೌಲಿಂಗ್ ದಾಳಿಗೆ ನಲುಗಿ 219 ರನ್ ಗಳಿಗೆ ಶರಣಾಯಿತು. ಇಂಗ್ಲಂಡ್‌ ತಂಡ ನೀಡಿದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫ‌ಲರಾದ ಭಾರತೀಯ ಮಹಿಳಾ ಆಟಗಾರ್ತಿಯರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ ಗಳಿಗೆ ಆಲೌಟ್‌ ಆಗುವ ಮೂಲಕ ಹಾಲಿ ಚಾಂಪಿಯನ್ನರಿಗೆ 9 ರನ್ ಗಳಿಂದ ಶರಣಾದರು.
 
ಭಾರತಕ್ಕೆ ಪೂನಂ ರಾವತ್‌ (86ರನ್) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿ ಫೈನಲ್‌ ಪಂದ್ಯದ ಹೀರೋಯಿನ್‌ ಹರ್ಮನ್‌ ಪ್ರೀತ್‌ ಕೌರ್‌ (51ರನ್) ಮತ್ತು ವೇದ ಕೃಷ್ಣಮೂರ್ತಿ (35ರನ್) ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು.
 
ಇಂಗ್ಲಂಡ್‌ ಪರ ಮಧ್ಯಮ ವೇಗಿ ಆನ್ಯಾ ಶ್ರುಭ್ಸೋಲ್‌ 6 ವಿಕೆಟ್‌ ಪಡೆದು ಮಿಂಚಿ ಆಂಗ್ಲರ ಪಾಲಿನ ಗೆಲುವಿನ ರೂವಾರಿಯಾದರು. ಅಂತಿಮವಾಗಿ ಭಾರ‌ತ 219 ರನ್ ಗಳಿಗೆ ಆಲೌಟ್‌ ಆಗಿ ಕೇವಲ 9 ರನ್ ಅಂತರದಿಂದ ಪರಾಭವಗೊಂಡಿದೆ. 

Leave a Reply

Your email address will not be published.