ಬಸವ ಪಂಚಮಿ ವೈಚಾರಿಕ ಹಬ್ಬಕ್ಕೆ ಸ್ಪಂದನೆ: ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ರಾಘು ಅಭಿನಂದನೆ


ದಾವಣಗೆರೆ : ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿ ಎಂಬ ಸಂಪ್ರದಾಯ ಹಬ್ಬದ ಬದಲಾಗಿ ನಾಡಿನ ಬಡ- ಅನಾಥ ಮಕ್ಕಳು, ರೋಗಿಗಳು, ವಯಸ್ಕರರಿಗೆ ಹಾಲು ವಿತರಣೆ ಮಾಡುವುದರ ಮೂಲಕ ಬಸವ ಪಂಚಮಿ ಎಂಬ ವೈಚಾರಿಕ ಹಬ್ಬವನ್ನು ಕರ್ನಾಟಕದಾದ್ಯಂತ ಅರ್ಥಪೂರ್ಣವಾಗಿ ಆಚರಿಸಿದೆ.

ಈ ಕಾರ್ಯಕ್ರಮವು ಯಶಸ್ವಿಯಾಗಲು ಶ್ರಮಿಸಿರುವ ನಾಡಿನ ಎಲ್ಲಾ ಬುದ್ದಿ ಜೀವಿಗಳು, ಸಂಘಟನೆಗಳ ಮುಖಂಡರು, ಮಾನವ ಬಂಧುತ್ವ ವೇದಿಕೆಯ ಎಲ್ಲಾ ಸಕ್ರಿಯ ಕಾರ್ಯಕರ್ತರಿಗೆ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ರಾಘು ದೊಡ್ಡಮನಿ ಅಭಿನಂದನೆ ಸಲ್ಲಿಸಿದ್ದಾರೆ.

ಉದಯನಾಡು ಇ –ವಾರ್ತೆ ಜೊತೆ ಮಾತನಾಡಿದ ಅವರು, ನಮ್ಮ ವೈಚಾರಿಕ ಕಾರ್ಯಕ್ರಮಗಳ ಬಗ್ಗೆ ಈ ಚಳುವಳಿಯ ಅರ್ಥ ಮಾಡಿಕೊಳ್ಳದ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಂತಹವರ ಪ್ರಶ್ನೆಗಳಿಗೆ ನಮ್ಮ ಸ್ಪಷ್ಟನೆ.

ನಾವು ಭಾರತೀಯ ಸಂಸ್ಕೃತಿ , ವೈವಿಧ್ಯತೆ ಹಾಗೆಯೇ ಇಲ್ಲಿನ ಪ್ರತಿ ಧರ್ಮದ ಸಂಪ್ರದಾಯಗಳನ್ನು ಗೌರವಿಸುತ್ತೇವೆ, ಅದೇ ರೀತಿ ಯಾವುದೇ ಜಾತಿ, ಧರ್ಮ, ದೇವರುಗಳ ವಿರೋಧಿಗಳಲ್ಲ, ಆದರೆ ಯಾವುದೇ ಧರ್ಮದ ದೇವರ ಹೆಸರಿನಲ್ಲಿ ನಡೆಯುವ ಕೆಲ ಮೂಢ ಆಚರಣೆಗಳನ್ನು ವಿರೋಧಿಸುತ್ತೇವೆ. ಆ ವಿಷಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇವೆ, ಜಾತಿ ಮುಕ್ತ ಸಮ ಸಮಾಜ ನಿರ್ಮಾಣ ಮಾಡುವುದು ಹಾಗೂ ಬಂಧುತ್ವದ ಸಂದೇಶ ಸಾರುವುದು ಮಾನವ ಬಂಧುತ್ವ ವೇದಿಕೆಯ ಉದ್ದೇಶವಾಗಿದೆ.

” ಭೇದ ಭಾವಗಳ ಬಿಟ್ಟು ಮನುಷ್ಯ ಮನುಷ್ಯನನ್ನು ಪ್ರೀತಿಸಿ ” ಎನ್ನುವ ಸಂದೇಶವನ್ನು ಸತೀಶ ಜಾರಕಿಹೊಳಿ ಅವರು ನಾಡಿಗೆ ಸಾರುತ್ತಿದ್ದಾರೆ. ಇಂತಹ ಕೆಲಸಕ್ಕೆ ಸಮಾಜದ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು.

7 Responses to "ಬಸವ ಪಂಚಮಿ ವೈಚಾರಿಕ ಹಬ್ಬಕ್ಕೆ ಸ್ಪಂದನೆ: ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ರಾಘು ಅಭಿನಂದನೆ"

 1. ನೀಲವೇಣಿ   July 29, 2017 at 5:25 pm

  ಸಾಮಾಜಿಕ ಜಾಲತಾನಗಳಲ್ಲಿ ಅಸಭ್ಯವಾಗಿ ಮಾತನಾಡುವವರು ಅವರ ಮರ್ಯಾದೆ, ಅವರ ಯೋಗ್ಯತೆ ಇಷ್ಟೊಂದು ಕೀಳಮಟ್ಟದ್ದು ಅಂತ ಅವರೇ ಲೋಕಕ್ಕೆ ಸಾರುತ್ತಿರುವರು ಸರ್😡 ನಿಮ್ಮ ಎಲ್ಲಾ ಕಾರ್ಯಗಳು ಟಿಆರ್ಪಿ ಗಳಿಸಲು ಎಂದ ವ್ಯಕ್ತಿಗಳು ಬಹುಶಃ ಅವರ ಎಲ್ಲಾ ಸಮಾಜ ಸುಧಾರನ ಕಾರ್ಯಗಳನ್ನ ಇಲ್ಲಿಯವರೆಗೆ ಟಿಆರ್ಪಿಗಾಗಿಯೆ ಮಾಡಿರಬಹುದು. ನೀವು ನಿಮ್ಮ ಕಾರ್ಯಗಳು ಈ ಜನಗಳ ಮೌಢ್ಯವನ್ನು ದೂರ ಮಾಡಲು ಸಕ್ರಿಯ ದಾರಿಯಲ್ಲಿ ಸಾಗುತ್ತಿರುವಿರಿ, ಮಧ್ಯ ದಾರಿಯಲ್ಲಿ ಅಡ್ಡ ಬರುವ ಇಂತಹ ಕಲ್ಲು, ಮುಳ್ಳುಗಳಂತಹ ಅಸಭ್ಯ ವರ್ತಕರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ👉 ಶುಭವಾಗಲಿ ಈ ನಿಮ್ಮ ಒಳ್ಳೆಯ ಕಾರ್ಯಗಳಿಗೆ💐

  Reply
 2. Sunil   July 29, 2017 at 6:24 pm

  Nivu olle kelasa madta idiya…hige munduvaresi kondu hogi Anna…

  Reply
 3. Ravi   July 29, 2017 at 6:31 pm

  Nice Job

  Reply
 4. VEERABHADRA M J   July 29, 2017 at 8:38 pm

  Humanity social work program.
  All the best Sir
  Thanking you sir

  Reply
 5. NOORULLA   July 29, 2017 at 8:39 pm

  Superb sir…

  Reply
 6. VEERABHADRAPPA M J   July 29, 2017 at 8:50 pm

  Humanity social work program.
  All the best Sir
  Thanking you sir

  Reply
 7. rangantha   July 30, 2017 at 7:12 am

  wow bro super … super

  Reply

Leave a Reply

Your email address will not be published.