ವಿಶ್ವ ಮಹಿಳಾ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಕಲೆಹಾಕಿದ ಮಿಥಾಲಿ ರಾಜ್

ಮಿಥಾಲಿ ರಾಜ್ ಆಟದ ಶೈಲಿ.

ಮಹಿಳಾ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ದಾಖಲೆ, 6000 ರನ್ ಗಡಿ ದಾಟಿದ ಮೊದಲ ಮಹಿಳಾ ಆಟಗಾರ್ತಿ

ಲಂಡನ್: ವಿಶ್ವ ಮಹಿಳಾ  ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ತಮ್ಮ ಖಾತೆಗೆ ಕಲೆಹಾಕುವ  ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವ ದಾಖಲೆ ಮಾಡಿದ್ದಾರೆ. 
 
ಮಿಥಾಲಿ ರಾಜ್ ಕೇವಲ 183 ಪಂದ್ಯದಲ್ಲಿ 5993 ರನ್ ಪೇರಿಸಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವದಾಖಲೆ ಇಂಗ್ಲೆಂಡಿನ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ಸ್ ಹೆಸರಿನಲ್ಲಿತ್ತು. ಎಡ್ವರ್ಡ್ಸ್ 191 ಪಂದ್ಯಗಳಲ್ಲಿ 5992 ರನ್ ಸಿಡಿಸಿದ್ದರು. ಇದೀಗ ಎಡ್ವರ್ಡ್ಸ್ ದಾಖಲೆಯನ್ನು ಮಿಥಾಲಿ ಮುರಿದಿದ್ದಾರೆ.
 
ಇನ್ನು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 6000 ರನ್ ಗಡಿ ದಾಟಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಮಿಥಾಲಿ ರಾಜ್ ಹೊರಹೊಮ್ಮಿದ್ದಾರೆ. 
 
16 ವರ್ಷವಿದ್ದಾಗ ಮಿಥಾಲಿ ರಾಜ್ 1999ರಲ್ಲಿ ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದಳು. ಶತಕದ ಮೂಲಕ ತನ್ನ ತಾಕತ್ತನ್ನು ಮಿಥಾಲಿ ತೋರಿಸಿದ್ದಳು. ಅಲ್ಲಿಂದ ಕ್ರಿಕೆಟ್ ಬದುಕನ್ನು ಆರಂಭಿಸಿದ್ದ ಮಿಥಾಲಿ ರಾಜ್ ಇಂದು ಟೀಂ ಇಂಡಿಯಾ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

Leave a Reply

Your email address will not be published.