ಮುಂಬೈ: ಭಾರತ ಕ್ರಿಕೆಟ ತಂಡದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಆಯ್ಕೆ


ಮುಂಬೈ: ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ತರಬೇತುದಾರರ ಆಯ್ಕೆ ಪ್ರಕ್ರಿಯೆ, ನಿನ್ನೆ ಏಕಾಏಕಿ ಮುಂದೂಡಲಾಗಿತ್ತು. ಸೌರವ್‍ಗಂಗೂಲಿ ಮತ್ತು ಶಾಸ್ತ್ರಿ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಇದರಿಂದಾಗಿ ಕ್ರಿಕೆಟ್ ಪ್ರಿಯರಲ್ಲಿ ಯಾರಿಗೆ ಈ ಸ್ಥಾನ ಒಲಿಯಲಿದೆ ಎಂಬ ಕಾತರ ಮೂಡಿಸಿತ್ತು. ಇಂದು ದಿಡೀರನೆ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಸಭೆ ಸೇರಿ ಅಳೆದು ತೂಗಿದಲ್ಲದೆ, ಕೊನೆಗೆ ಲಂಡನ್‍ನಲ್ಲಿದ್ದ ಶಾಸ್ತ್ರಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಹಂಗಾಮಿ ತರಬೇತುದಾರರಾಗಿ ಭಾರತ ತಂಡವನ್ನು ಮುನ್ನಡೆಸಿದ್ದ ಶಾಸ್ತ್ರಿ ಪರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಒಲವು ಹೊಂದಿದ್ದರು. ಒಟ್ಟಾರೆ, ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಶಾಸ್ತ್ರಿಗೆ  ಒಲಿದಿದೆ.

ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಎಸ್‌ ಲಕ್ಷ್ಮಣ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ ಸೋಮವಾರ ಒಟ್ಟು ಐದು ಜನ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿತ್ತು. ವಿರೇಂದ್ರ ಸೆಹ್ವಾಗ್‌, ಟಾಮ್ ಮೂಡಿ, ರಿಚರ್ಡ್‌ ಪೇಬಸ್‌, ಫಿಲ್‌ ಸಿಮನ್ಸ್‌, ಲಾಲ್‌ಚಂದ್‌ ರಜ್‌ಪೂತ್‌ ಮತ್ತು ಶಾಸ್ತ್ರಿ ಸಂದರ್ಶನ ಎದುರಿಸಿದ್ದರು. ರವಿಶಾಸ್ತ್ರಿ ಹಾಗೂ ವಿರೇಂದ್ರ ಸೆಹ್ವಾಗ್‌ ಹೆಸರು ಹೆಚ್ಚು ಮುಂಚೂಣಿಯಲ್ಲಿತ್ತು.

ತಮ್ಮನ್ನು ಕೋಚ್‌ ಆಗಿ ಆಯ್ಕೆ ಮಾಡುವುದಾದರೇ ಅರ್ಜಿ ಸಲ್ಲಿಸುತ್ತೇನೆ ಎಂದು ರವಿಶಾಸ್ತ್ರಿ ಈ ಮೊದಲು ಹೇಳಿದ್ದರು. ಅದರಂತೆ ರವಿಶಾಸ್ತ್ರಿಯೇ ಮುಂದಿನ ಕೋಚ್‌ ಆಗ್ತಾರೆ ಅಂತಾ ಎಲ್ಲಡೆ ಚರ್ಚೆಯಾಗಿತ್ತು. ಎಲ್ಲರೂ ಊಹಿಸಿದಂತೆಯೇ ಇದೀಗ ಟೀಂ ಇಂಡಿಯಾ ನಿರ್ದೇಶಕ ಮಾಜಿ ನಿರ್ದೇಶಕ ರವಿಶಾಸ್ತ್ರಿ ಕೊಹ್ಲಿ ಪಡೆಗೆ ಮಾರ್ಗದರ್ಶನ ನೀಡಲು ನೇಮಕವಾಗಿದ್ದಾರೆ.

ರವಿಶಾಸ್ತ್ರಿ 2019ರ ವಿಶ್ವಕಪ್‌ ವರೆಗೂ ಟೀಂ ಇಂಡಿಯಾ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜುಲೈ 26 ರಿಂದ ಟೀಂ ಇಂಡಿಯಾ ನೆರೆಯ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹೊಸ ಕೋಚ್‌ ರವಿಶಾಸ್ತ್ರಿಗೆ ಇದು ಮೊದಲ ಪರೀಕ್ಷೆ.

Leave a Reply

Your email address will not be published.