ಮೈಸೂರು: ಬೋನಿಗೆ ಬಿದ್ದ 4 ವರ್ಷದ ಗಂಡು ಚಿರತೆ


ಮೈಸೂರು: ತಾಲೂಕಿನ ಮೇಗಳಾಪುರ ಹೊಸಹಳ್ಳಿ ಗ್ರಾಮಗಳಲ್ಲಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ  ವೈದರ ತೋಟದ ಮನೆಯಲ್ಲಿ ಬೋನಿಗೆ ಬಿದ್ದಿದ್ದು, ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮದ ಜನರು ಅರಣ್ಯ ಇಲಾಖೆಗೆ ಚಿರತೆ ಹಿಡಿದುಕೊಂಡು ಹೋಗುವಂತೆ ಹಲವು ಬಾರಿ ಮನವಿ ಸಲ್ಲಿಸಿದರು.  ವಲಯ ಅರಣ್ಯಾಧಿಕಾರಿ ಪುಟ್ಟರಾಜು ನೇತೃತ್ವದ ಕಾರ್ಯಾಚರಣೆ ನಡೆಸಿ 4 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಮೇಗಳಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published.