ಮೈಸೂರು: ಹಾಸಿಗೆ ಮೇಲೆ ಮೂತ್ರ ವಿಸರ್ಜನೆ, ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿದ ತಂದೆ


ಮೈಸೂರು:ಹಾಸಿಗೆ  ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಕ್ರೂರಿ ತಂದೆಯೊಬ್ಬ ತನ್ನ ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂಬ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮೈಸೂರಿನ ಪಿರಿಯಾಪಟ್ಟಣದ ನಿವಾಸಿ ನಾಗರಾಜ್ ಎಂಬಾತ ತನ್ನ ನಾಲ್ಕು ವರ್ಷದ ಮಗನಿಗೆ ದಿನನಿತ್ಯ ರಾತ್ರಿ ಮಲಗುವ ವೇಳೆ ಮರ್ಮಾಂಗಕ್ಕೆ ರಬ್ಬರ್ ಬ್ಯಾಂಡ್ ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ವ್ಯಕ್ತಿಯೊಬ್ಬರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಕೂಡಲೇ  ಬಾಲಕನಿರುವ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಬಾಲಕನ ಮರ್ಮಾಂಗ ಗಾಯಗೊಂಡಿರುವುದು ಹಾಗೂ ಕೈಗಳು, ಹೊಟ್ಟೆ ಭಾಗದಲ್ಲಿ ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ಬಾಲಕನಿಗೆ ಚಿಕಿತ್ಸೆಗೆ ನೀಡಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪಿರಿಯಾಪಟ್ಟಣದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.