ಪತ್ನಿ ಕರೆಯಲು ಅತ್ತೆ ಮನೆಗೆ ಬಂದ ಅಳಿಯ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆ


ಮೈಸೂರು: ಪತ್ನಿಯನ್ನು ಕರೆದುಕೊಂಡು ಹೋಗಲು ಅತ್ತೆ  ಮನೆಗೆ ಬಂದಿದ್ದ ಪತಿ ಸುಟ್ಟ ಸ್ಥಿತಿಯಲ್ಲಿ  ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ನಂಜನಗೂಡಿನಮಾಕನಾಪುರ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕೊತನೂರು ಗ್ರಾಮದ ನಿವಾಸಿ ನಾಗರಾಜ ಶೆಟ್ಟಿ(36) ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ. 6 ವರ್ಷದ ಹಿಂದೆ ಮಾಕನಾಪುರ ಗ್ರಾಮದ ಮಣಿ ಎಂಬುವವಳನ್ನ ಮದುವೆಯಾಗಿದ್ದ. ಪತ್ನಿ ಗಂಡನ ಮನೆಯಿಂದ ಜಗಳವಾಡಿ ತವರು ಮನೆ ಸೇರಿದ್ದಳು. ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದ ಎನ್ನಲಾಗಿದ್ದು. ಮಾಕನಾಪುರ ಗ್ರಾಮದ ಪಕ್ಕದ ಹಳ್ಳಿ ಕುಸುವಿನಹಳ್ಳಿ ಗ್ರಾಮದಲ್ಲಿ ಸುಟ್ಟ ಸ್ಥಿತಿಯನ್ನು ಶವ ಪತ್ತೆಯಾಗಿದೆ.

ಅತ್ತೆ ಮನೆಯವರು ಕೊಲೆ ಮಾಡಿದ್ದಾರೆಂದು ನಾಗರಾಜು ಪೋಷಕರು ನಂಜನಗೂಡು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹೆಂಡತಿ ಮತ್ತು ಪೋಷಕರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.