ಹಿಟ್‌ ಆ್ಯಂಡ್‌ ರನ್‌: ಎತ್ತು ಸಾವು, ರಸ್ತೆ ಮಧ್ಯೆ ಕುಳಿತು ಬಿಕ್ಕಿಬಿಕ್ಕಿ ಅತ್ತ ರೈತ


ಮೈಸೂರು: ಅಪರಿಚಿತ ವಾಹನ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಂದು ಎತ್ತು ಸಾವನ್ನಪ್ಪಿದ್ದು, ಇನ್ನೊಂದು ಗಂಭೀರ ಗಾಯಗೊಂಡ ಘಟನೆ ಘಟನೆ ಅಡಕನಹಳ್ಳಿ ಹುಂಡಿ-ಕೆಐಎಡಿಬಿ ರಸ್ತೆಯಲ್ಲಿ  ನಡೆದಿದ್ದು, ಪ್ರೀತಿಯಿಂದ ಸಾಕಿದ ಎತ್ತುಗಳ ಮರುಗುವ ಸ್ಥಿತಿ ಕಂಡು  ರೈತ  ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು.

ರೈತ ರವಿವಾರ ಬೆಳಿಗ್ಗೆ ತಾಂಡವಪುರ ಗ್ರಾಮದ ಹೊರವಲಯದ ಜಮೀನನಲ್ಲಿ ಉಳುಮೆ ಮಾಡಿ ಗ್ರಾಮದ ಕಡೆ ತೆರಳುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರೊಂದು ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಎತ್ತಿನಗಾಡಿಯಲ್ಲಿದ್ದ ರೈತ ಅಪಾಯದಿಂದ ಪಾರಾಗಿದ್ದು, ಜೋಡಿ ಎತ್ತುಗಳಲ್ಲಿ ಒಂದು ಸಾವನ್ನಪ್ಪಿದರೆ ಮತ್ತೊಂದು ಗಂಭೀರ ಗಾಯಗೊಂಡಿದೆ.

ಈ ಮೂಕ ಪ್ರಾಣಿಗಳ ಸ್ಥಿತಿ ಕಂಡು ಮರುಗುತಿದ್ದ ರೈತನನ್ನು ಕಂಡು ಎಲ್ಲರೂ ಭಾವುಕರಾಗಿದ್ದಾರೆ.

Leave a Reply

Your email address will not be published.