ಮನೆ ಕೆಲಸಕ್ಕೆ ಬಂದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ


ಮೈಸೂರು: ಇಲ್ಲಿಯ ರಾಮಕೃಷ್ಣನಗರದ ಐ ಬ್ಲಾಕ್‌  ಮನೆಯೊಂದಕ್ಕೆ  ಕೆಲಸಕ್ಕೆ ಬರುತ್ತಿದ್ದ ಮಹಿಳೆ ಮಾಲೀಕನ ಮನೆಯಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾಳೆ. ಕಳುವು ಮಾಡುತ್ತಿರುವ ಚಿತ್ರಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆ ಮಾಲೀಕ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ರಾಮಕೃಷ್ಣನಗರ ಐ ಬ್ಲಾಕ್‌ನ ರವೀಂದ್ರ ಪಿ.ರಾವ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.  ಕಳೆದ 6 ತಿಂಗಳಿನಿಂದ ಕೆಲಸಕ್ಕೆ ಬರುತ್ತಿರುವ  ಶುಭ ಎಂಬ ಮಹಿಳೆ  ಶುಕ್ರವಾರ ಮನೆ ಕೆಲಸಕ್ಕೆ ಬಂದು ಕಳ್ಳತನ ಮಾಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ 12 ಸಾವಿರ ಹಣ , ನಾಲ್ಕು ಚಿನ್ನದ ನೆಕ್ಲೆಸ್, 4 ಚಿನ್ನದ ಬಳೆ, 8 ಉಂಗುರ, 5 ಚಿನ್ನದ ಓಲೆ, ಚಿನ್ನದ ಸರ್ಪಣಿ ಚೈನು, 2 ಐಫೋನ್, 5 ಕಾಟನ್ ಸೀರೆ, ಹತ್ತು ರೇಷ್ಮೆ ಸೀರೆ ಸೇರಿದಂತೆ 10 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾಳೆ.
ಕದ್ದು ಪರಾರಿಯಾಗುತ್ತಿರುವ ದೃಶ್ಯ ಮನೆಯಲ್ಲಿ ಹಾಕಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದಾಖಲೆ ಸಮೇತ ಮನೆಯ ಮಾಲೀಕ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕಳ್ಳಿಗಾಗಿ ಹುಡುಕುತ್ತಿದ್ದಾರೆ.

Leave a Reply

Your email address will not be published.