ಗೃಹಿಣಿ ಅಪಹರಿಸಿ ಮಾರಾಟಕ್ಕೆ ಯತ್ನ: ಮೂವರ ಬಂಧನ


ಮೈಸೂರು: ಗೃಹಿಣಿಯೊಬ್ಬಳನ್ನು  ಅಪಹರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಆರೋಪಿಗಳನ್ನು ಪೊಲೀಸರು ಖೆಡ್ಡಾಕೆ ಕೆಡವಿದ್ದಾರೆ.

ಹುಣಸೂರು ತಾಲೂಕಿನ ಟಿಪ್ಪುನಗರದ ನಿವಾಸಿ ಸೈಯದ್(32), ಮಧು, ರವಿ ಬಂಧಿತರು.  ಹುಣಸೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ 25 ವರ್ಷದ ಗೃಹಿಣಿ ತನ್ನ ಮನೆಯ ಆವರಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೂವರು ಕಾರಿನಲ್ಲಿ ಬಂದು  ಮಹಿಳೆಯನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ಪತಿ ಹುಣಸೂರು ಪೊಲೀಸ ಠಾಣೆಗೆ ದೂರು ನೀಡಿದ್ದರು.

ಕೂಡಲೇ ಕಾರ್ಯಪ್ರವ್ರತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಹುಣಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

 

Leave a Reply

Your email address will not be published.