ಮೈಸೂರು ಮೃಗಾಲಯದಲ್ಲಿನ ಹುಲಿ ದತ್ತು ಪಡೆದ ಹುಬ್ಬಳಿ ಟೈಗರ್ಸ್ ತಂಡ


ಮೈಸೂರು: ಹುಬ್ಬಳ್ಳಿ ಕೆಪಿಎಲ್ ತಂಡದ ಆಟಗಾರರು ಬುಧವಾರ ಇಲ್ಲಿನ ಮೃಗಾಲಯಕ್ಕೆ ಭೇಟಿ ನೀಡಿ ಒಂದು ವರ್ಷದ ಅವಧಿಗೆ ಹುಲಿಯೊಂದನ್ನು ದತ್ತು ಸ್ವೀಕರಿಸಿದ್ದಾರೆ.

ಬುಧವಾರ ನಡೆದ ಕೆಪಿಎಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಗೆಲುವು ಸಾಧಿಸಿತು. ಇದೇ ಖುಷಿಯಲ್ಲಿ ತಂಡದ ಎಲ್ಲಾ ಆಟಗಾರರು ಗುರುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಒಂದು ವರ್ಷದ ಅವಧಿಗೆ ಒಂದು ಲಕ್ಷ ರೂ.ಹಣ ನೀಡಿ ಹುಲಿಯನ್ನು ದತ್ತು ಸ್ವೀಕರಿಸಿದ್ದಾರೆ.

ಹುಬ್ಬಳ್ಳಿ ಟೈಗರ್ಸ್ ತಂಡ ಕಳೆದ ಮೂರು ವರ್ಷದಿಂದ ಮೈಸೂರು ಮೃಗಾಲಯದಲ್ಲಿನ ಒಂದು ಹುಲಿಯನ್ನು ದತ್ತು ಪಡೆಯುತ್ತಿದ್ದು, ಇದರ ವೆಚ್ಚಕ್ಕಾಗಿ ವರ್ಷಕ್ಕೆ ಒಂದು ಲಕ್ಷ ಹಣ ನೀಡುತ್ತಿದೆ. ಕೆಪಿಎಲ್‌ನಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಈ ಬಾರಿಯೂ ತಂಡ ಪ್ರಾಣಿಯನ್ನು ದತ್ತು ಸ್ವೀಕಾರ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ತಂಡದ ನಾಯಕ ವಿನಯ್ ಕುಮಾರ್, ಪ್ರಾಣಿ-ಪಕ್ಷಿಗಳನ್ನು  ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ನಾವು  ಶ್ರಮಿಸಬೇಕು. ತಂಡದಿಂದ ಹುಲಿ ದತ್ತು ಪಡೆದಿರೋದು ತುಂಬಾ ಖುಷಿ ತಂದಿದೆ,ತಂಡ ಹೊರತುಪಡಿಸಿ ನಾನು ಮುಂದೆ ಕೆಲ ಪ್ರಾಣಿಗಳನ್ನ ದತ್ತು ಪಡೆಯುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published.