ಪ್ರಧಾನಿ ಭಾಷಣ ಕಡ್ಡಾಯ: ಯುಜಿಸಿ ನಿಯಮ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ


ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಕಡ್ಡಾಯವಾಗಿ ವಿವಿ ವಿದ್ಯಾರ್ಥಿಗಳು ಆಲಿಸಬೇಕು ಎಂದು ಯುಜಿಸಿ ಹೊರಡಿಸಿರುವ  ಸುತ್ತೋಲೆಯನ್ನು ಖಂಡಿಸಿ ನಗರದ ಸೆನೆಟ್ ಭವನದಲ್ಲಿ ಸೋಮವಾರ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಸ್ವಾಮಿ ವಿವೇಕಾನಂದ ಅವರ ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ನಿಮತ್ತ  ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಅಧ್ಯಾಪಕರು ಕಡ್ಡಾಯವಾಗಿ ಕೇಳಬೇಕೆಂದು ಯುಜಿಸಿಯು ರಾಷ್ಟ್ರ ಎಲ್ಲಾ ವಿವಿಗಳಿಗೆ ಸುತ್ತೂಲೆ ಹೊರಡಿಸಿತ್ತು.

ಮೈಸೂರು ವಿವಿಯ ಮಾನಸ ಗಂಗೋತ್ರಿಯ ಆವರಣದ ಸೆನೆಟ್ ಭವನದಲ್ಲಿ ದೊಡ್ಡ ಪರದೆಯ ಮೂಲಕ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಅವಕಾಶ ಕಲ್ಪಿಸಲಾಗಿತ್ತು.  ಇದನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ವಿಚಾರವಾದಿ ಹಾಗೂ ಹೋರಾಟಗಾರ ಪಾ. ಮಲ್ಲೇಶ ಮಾತನಾಡಿ, ನಾನು ಭಾಷಣ ಮಾಡುತ್ತೇನೆ. ನೀವು ಕೇಳಬೇಕೆಂಬ ಆದೇಶವನ್ನು ಹೊರಡಿಸಿರುವ ಯುಜಿಸಿ ನಿರ್ಧಾರ ಅವಿವೇಕಿನತನಿಂದ ಕೂಡಿದೆ ಎಂದು ಯುಜಿಸಿ ವಿರುದ್ದ ಕಿಡಿಕಾರಿದರು.

ಪ್ರತಿಭಟನೆಯ ನಡುವೆಯೂ ವಿವಿ ಆವರಣದ ಸೆನೆಟ್ ಭನವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಧಾನಿ ಮೋದಿ  ಭಾಷಣ ಆಲಿಸಿದರು.

Leave a Reply

Your email address will not be published.