ಶಿಡ್ಲಘಟ್ಟ: ಜಾಲತಾಣಗಳ ಮೂಲಕ ದೇಶದ ಶಾಂತಿಗೆ ಧಕ್ಕೆ ತರುವ ಜನರನ್ನು ಗಲ್ಲಿಗೇರಿಸಿ

ಪ್ರವಾದಿ ಮೊಹ್ಮದ್ ಪೈಗಂಬರ್ ಅವರನ್ನು ಅವಹೇಳನೆ ಮಾಡಿರುವ ಸೋನು ಡ್ಯಾಂಗೂರ್ ಮರಣದಂಡಣೆ ವಿಧಿಸಬೇಕೆಂದು ಆಗ್ರಹಿಸಿ ಶಿಡ್ಲಘಟ್ಟ ತಹಶೀಲ್ದಾರ್ ಅಜೀತ್‍ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.
ಪ್ರವಾದಿ ಮೊಹ್ಮದ್ ಪೈಗಂಬರ್ ಅವರನ್ನು ಅವಹೇಳನೆ ಮಾಡಿರುವ ಸೋನು ಡ್ಯಾಂಗೂರ್ ಮರಣದಂಡಣೆ ವಿಧಿಸಬೇಕೆಂದು ಆಗ್ರಹಿಸಿ ಶಿಡ್ಲಘಟ್ಟ ತಾಲೂಕು ಕಛೇರಿಯ ಮುಂದೆ ಮುಸ್ಲಿಂರು ಬೃಹತ್ ಪ್ರತಿಭಟನೆ ನಡೆಸಿದರು.

ಶಿಡ್ಲಘಟ್ಟ: ಸಾಮಾಜಿಕ ಜಾಲತಾಣಗಳ ಮತ್ತು ಇತರೆ ಮಾಧ್ಯಮಗಳ ಮೂಲಕ ಧರ್ಮಗಳ ಅವಹೇಳನ ಮಾಡುವ ಮೂಲಕ ದೇಶದ ಶಾಂತಿಗೆ ಧಕ್ಕೆಯನ್ನುಂಟು ಮಾಡುವವರನ್ನು  ಗಲ್ಲಿಗೇರಿಸಬೇಕು ಎಂದು ಶುಕ್ರವಾರ ಮುಸ್ಲಿಂ ಬಾಂಧವರು ಆಗ್ರಹಿಸಿದರು.

ಇತ್ತಿಚೀಗೆ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ ಪೈಗಂಬರ್ ವಿರುಧ್ಧ ಅವಹೇಳನಕಾರಿಯಾಗಿ ನಿಂದಿಸಿರುವ ಗುಜರಾತಿನ ಸೋನು ಡ್ಯಾಂಗೂರ್ ಎಂಬಾಕೆಯನ್ನು ಮರಣದಂಡಣೆ ವಿಧಿಸಬೇಕೆಂದು ಪ್ರತಿಭಟನೆ ನಡೆಸಿದರು.

ನಗರದ ಜಾಮೀಯಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಹಮ್ಮದ ಪೈಗಂಬರ್  ಅವರನ್ನು ಅವಹೇಳನೆ ಮಾಡಿರುವ ಗುಜರಾತಿನ ಸೋನು ಡ್ಯಾಂಗೂರ್ ವಿರುಧ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ ಸಮಾಜದಲ್ಲಿ ವಿಷದ ಬೀಜವನ್ನು ಬಿತ್ತನೆ ಮಾಡಿ ಕೋಮು ಸೌರ್ಹಾದತೆಗೆ ಧಕ್ಕೆ ತರಲು ಹುನ್ನಾರ ನಡೆಸಿರುವ ಸೋನು ಡ್ಯಾಂಗೂರ್‍ಗೆ ಗಲ್ಲಿಗೇರಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಕಚೇರಿ ಎದುರು ಜಮಾಯಿಸಿದ್ದ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಜಾಮೀಯಾ ಮಸೀದಿಯ ಧರ್ಮಗುರು ಹಜರತ್ ನಝರ್ ಸಲಾಮಿ ಮಾತನಾಡಿ, ಈ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೆ ಎಲ್ಲ ಧರ್ಮ ಜಾತಿಯವರೂ ಸಹ ಸಹೋದರತಾ ಭಾವನೆಯಿಂದ ಬದುಕುತ್ತಿದ್ದೇವೆ ಆದರೆ ಗುಜರಾತಿನ ಸೋನು ಡ್ಯಾಂಗೂರ್ ಎಂಬಾಕೆ ನಮ್ಮ ಮಹಮದ್ ಪೈಗಂಬರ್ ವಿರುದ್ದ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಇಡೀ ಇಸ್ಲಾಂ ಧರ್ಮವನ್ನು ಅಪಮಾನಿಸಿದ್ದಾರೆ ಇದರಿಂದ ಕೋಮು ಸೌಹಾರ್ಧತೆಗೂ ಧಕ್ಕೆ ತರಲು ಯತ್ನಿಸಿರುವುದು ಖಂಡನೀಯ ಎಂದರು.

ಹಲವು ಜಾತಿ ಧರ್ಮಗಳ ನೆಲೆಬೀಡಾದ ದೇಶದಲ್ಲಿ ಎಲ್ಲಾ ಜಾತಿ ಮತ್ತು ಧರ್ಮದವರು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾರೆ ಆದರೆ ಸೋನು ಅಂತಹವರಿಂದ ಶಾಂತಿ,ಸೌರ್ಹಾದತೆಗೆ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುವುದು ಶಿಕ್ಷಾರ್ಹ ಅಪರಾಧ ಕೂಡಲೇ ಆಕೆಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕೋಮು ದ್ವೇಷ ಬಿತ್ತುವ ಎಲ್ಲರಿಗೂ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು.

ಜಾಮೀಯಾ ಮಸೀದಿಯ ಪದಾಧಿಕಾರಿಗಳು ತಹಶೀಲ್ದಾರ್ ಅಜೀತ್‍ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು ಮನವಿಯನ್ನು ಸ್ವೀಕರಿಸಿ ಮಾತನಾಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮುಸ್ಲಿಂ ಬಾಂಧವರು ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಅವರ ನೇತೃತ್ವದಲ್ಲಿ ನಗರ ಪೋಲಿಸ್‍ಠಾಣೆಯ ಪಿಎಸ್‍ಐ ನವೀನ್,ಗ್ರಾಮಾಂತರ ಪೋಲಿಸ್‍ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಮತ್ತು ಸಿಬ್ಬಂದಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.

ಧರ್ಮಗುರುಗಳಾದ ಅಫಝಲ್ ಇಮಾಂ,ಹಝರತ್ ಸರ್ವರ್, ಬಿಲಾಲ್ ಮಸೀದಿಯ ಮೌಲಾನಾ ಇರ್ಷಾದ್ ಆಲಂ,ಮೌಲಾನಾ ತಹಸೀನ್ ರಝಾ, ಜಾಮೀಯಾ ಮಸೀದಿಯ ಅಧ್ಯಕ್ಷ ಸೈಯದ್ ತಾಜ್‍ಪಾಷ, ಉಪಾಧ್ಯಕ್ಷ ಅಮೀರ್‍ಜಾನ್, ಕಾರ್ಯದರ್ಶಿ ಹೈದರ್‍ಅಲೀ, ಆಮೀರಿಯಾ ಮಸೀದಿಯ ಅಧ್ಯಕ್ಷ ಬಾಬಾಜಾನ್, ಕಾರ್ಯದರ್ಶಿ ಸೈಯದ್ ಅಲ್ತಾಫ್ ಹುಸೇನ್, ನಿವೃತ್ತ ಪ್ರಾಂಶುಪಾಲ ಮೊಹ್ಮದ್ ಖಾಸಿಂ ಸೇರಿದಂತೆ ವಿವಿಧ ಮಸೀದಿಗಳ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಮತ್ತು ಮುಖಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published.