ಶಿಡ್ಲಘಟ್ಟ: ಅರಣ್ಯ ಪ್ರದೇಶದಲ್ಲಿ ಜಿಂಕೆ ಶವ ಪತ್ತೆ


ಶಿಡ್ಲಘಟ್ಟ: ತಾಲೂಕಿನ ಕೆ.ಮುತ್ತುಕದಹಳ್ಳಿಯ ಅರಣ್ಯದಲ್ಲಿ ಪ್ರಾಣಿಗಳ ದಾಳಿಗೆ ಒಳಗಾಗಿ ಜಿಂಕೆಯೊಂದು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಾಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕೆ.ಮುತ್ತುಕದಹಳ್ಳಿಯ ಅರಣ್ಯದಲ್ಲಿ ಜಿಂಕೆಯೊಂದು ಕೊಳೆತ ಸ್ಥಿತಿಯಲ್ಲಿ ಗೋಚರಿಸಿದೆ ಕಾಡಿನಲ್ಲಿನ ಕಾಡು ಹಂದಿ, ತೋಳ ಅಥವಾ ನಾಯಿಗಳಿದ್ದು, ಈ ಯಾವುದೋ ಪ್ರಾಣಿಗಳ ದಾಳಿಗೆ ತುತ್ತಾಗಿರಬಹದು ಇಲ್ಲವೇ ಜಿಂಕೆ ಜಿಂಕೆಗಳ ನಡುವೆಯೂ ಗುದ್ದಾಟ, ತಿವಿತ ನಡೆದಿದ್ದು ಅದೂ ಸಹ ಜಿಂಕೆಯ ಸಾವಿಗೆ ಕಾರಣ ಆಗಿರಬಹುದು ಎಂದು ಅರಣ್ಯ ಇಲಾಖೆಯ ಅಕಾರಿಗಳು ಶಂಕಿಸಿದ್ದಾರೆ.

ಮೃತ ಜಿಂಕೆಯ ಕಾಲು ಸೇರಿದಂತೆ ಹಲವು ಕಡೆ ಗಾಯಗಳಾಗಿದ್ದು ದೇಹ ಕೊಳೆತ ಸ್ಥಿತಿಯಲ್ಲಿರುವುದರಿಂದ ನಿಖರವಾದ ವಯಸು ತಿಳಿಯಲು ಆಗುತ್ತಿಲ್ಲ ಗಾಯಗಳ ಆಧಾರದಲ್ಲಿ ಇದು ಕಾಡಿನ ಇತರೆ ಪ್ರಾಣಿಗಳ ದಾಳಿಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ ಮೃತ ಜಿಂಕೆಯ ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಅಕಾರಿ ತಿಮ್ಮರಾಯಪ್ಪ ತಿಳಿಸಿದ್ದಾರೆ.

ಜಿಂಕೆ ಮೃತಪಟ್ಟು ದುರ್ವಾಸನೆ ಬೀರುತ್ತಿದ್ದರು ಸಹ ಅರಣ್ಯ ಇಲಾಖಾಧಿಕಾರಿಗಳು ಗಮನಹರಿಸದಿರುವುದಕ್ಕೆ ಪ್ರಾಣಿ ಪ್ರೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.