ಮಳೆಯ ಅಬ್ಬರಕ್ಕೆ ಕುಸಿದ ತರಕಾರಿ ಬೆಲೆ:ಇಕ್ಕಟ್ಟಿಗೆ ಸಿಲುಕಿದ ತರಕಾರಿ ಬೆಳೆಗಾರ


ಹುಬ್ಬಳ್ಳಿ: ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿ ಸಾಗಿದೆ,ಕಳೆದ ಒಂದು ತಿಂಗಳಿನಿಂದ ವರಣ ಅರ್ಭಟ ಮಿತಿಮಿರಿದೆ. ಮಳೆ ಆಗುತ್ತಿಲ್ಲಾ ಎನ್ನುವ ಜನರು ಮಳೆ ಸಾಕು ಸಾಕು ಎನ್ನುವ ರೀತಿಯಲ್ಲಿ ಮಳೆಯಾಗಿದ್ದು ರಾಜ್ಯದಲ್ಲಿನ ಮನುಜಸಂಕುಲದ ಮೇಲೆ ವಿಪರೀತವಾದ ಪರಿಣಾಮ ಬಿರಿದಂತಹ ಸನ್ನಿವೇಶಗಳನ್ನು ನೋಡಿದ್ದೇವೆ.

ಹಿಂಗಾರು ಮಳೆ ಅನ್ನದಾತನ ಮೇಲೂ ಸಹ ವಿಪರಿತವಾದ ಪರಿಣಾಮ ಬಿರಿದೆ.ಇಷ್ಟು ದಿನ ಅಂದರೆ ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆಯಲ್ಲಿ ಬಾರಿ ಏರಿತವಾಗಿತ್ತು,ಪ್ರತಿ ತರಕಾರಿ ಬೆಲೆಗೆ 40 ರಿಂದ 50 ರೂ ಗೆ ಏರಿತ್ತು ಇದರಿಂದ ಸಾಮಾನ್ಯಜನರಿಗೆ ತರಕಾರಿ ಕೊಳ್ಳುವುದು ಬಾರಿ ಕಷ್ಟಕರವಾಗಿತ್ತು, ಸದ್ಯ ಹಿಂಗಾರು ಮಳೆಯಿಂದ ಗಗನಕ್ಕೆ ಏರಿದಂತಹ ತರಕಾರಿಗಳ ಬೆಲೆ ಸ್ವಲ್ಪ ಮಟ್ಟಿಗೆ ಇಳಿತವಾಗಿದೆ, ಪ್ರಮುಖ ತರಕಾರಿಬೆಳೆಗಾಳದ ಹಿರೇಕಾಯಿ,ಕುಂಬಳಕಾಯಿ. ಟೋಮೊಟೊ, ಮೆಣಸಿನಕಾಯಿ, ಸೌತೆಕಾಯಿ,ಇನ್ನಿತರ ತರಕಾರಿ ದರಗಳು ಮಾರುಕಟ್ಟೆಯಲ್ಲಿ ಕೊಂಚಮಟ್ಟಿಗೆ ಇಳಿಕೆ ಆಗಿದೆ.

ತರಕಾರಿ ಬೆಳಗಾರ ಸಂಕಷ್ಟದಲ್ಲಿ: ತರಕಾರಿಗಳನ್ನು ಬೆಳಯುವಂತಹ ಬೆಳಗಾಗರ ಸದ್ಯ ಇಕ್ಕಟಿಗೆ ಸಿಲುಕಿದ್ದಾರೆ,ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ  ಹೊಲದಲ್ಲಿನ ತರಕಾರಿಗಳಿಗೆ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಕೊಳೆಯುತ್ತಿವೆ, ಹೂ ಹಾಗೂ ಕಾಯಿಗಳು ಸಹ ಮಳೆಯ ರಭಸಕ್ಕೆ ಮಳೆಯ ಪಾಲಾಗುತ್ತಿವೆ,ಅದೇ ರೀತಿ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕಷ್ಟ ಅನುಭವಿಸುತ್ತಿದ್ದಾನೆ.

ಸ್ವಲ್ಪ ದರ ಇಳಿಕೆ ಖುಷಿಕೊಟ್ಟಿದೆ: ಕಳೆದ ಎರಡು ತಿಂಗಳಿಂದ ಮಾರುಕಟ್ಟೆಯಲ್ಲಿ ಸಿಗುವಂತಹ ತರಕಾರಿಗಳ ಬೆಲೆಗಳು ಗಗಣಕ್ಕೆ ಇರಿದ್ದವು ಪ್ರತಿ ತರಕಾರಿ ಬೆಲೆಬ ಕೇಜಿಗೆ ೫೦ರೂ ಮೆಲ್ಪಟ್ಟಿತ್ತು ಇದರಿಂದ ತರಕಾರಿಗಳನ್ನಯ ಕೊಳ್ಳುವುದು ಕಷ್ಟಕರವಾಗಿತ್ತು,ಸದ್ಯ ಮಾರುಕಟ್ಟೆಯಲ್ಲಿ ದರ ಇಳಿದಿದ್ದು ಬಡವರರಿಗೆ,ಕೂಲಿಕಾರ್ಮಿಕರಿಗೆ ಅನೂಕಲವಾಗಿದೆ ಎನ್ನುತ್ತಾರೆ ಗ್ರಾಹಕರು.

ಸಿಹಿ ಕಹಿ ತಂದ  ಮಳೆ: ನಾವು ಇಷ್ಟು ದಿನ ಮಳೆ ಬೇಕು ಬೇಕು ಎಂದು ಚಡಪಡಿಸುತ್ತಿದ್ದವು,ಸದ್ಯ ಮಳೆ ಉತ್ತಮವಾಗುತ್ತಿದ್ದು, ತರಕಾರಿಗಳ ಬೆಲೆ ಕೊಂಚ ಇಳಿದೆ,ಆದರೆ ಹಿಂಗಾರು ಬೆಳೆಗಳು ಉತ್ತಮವಾಗಿ ಬರುವ ನಿರೀಕ್ಷೆ ಯಲ್ಲಿದ್ದು ಮಳೆ ಸ್ವಲ್ಪ ಜನರಿಗೆ ಸಿಹಿ ತಂದರೆ ಕೆಲವರು ಕಹಿ ಅನುಭವವನ್ನು ನೀಡಿದೆ ಎನ್ನುತ್ತಾರೆ ತರಕಾರಿ ಬೆಳೆಗಾರರು.

ಇಷ್ಟುದಿನ ತರಕಾರಿ ತೆಗೆಕೊಳ್ಳಲು ಕಷ್ಟ ಪಡುವಂತಹ ಜನಸಾಮಾನ್ಯರು. ಕೂಲಿಕಾರ್ಮಿಗರಿಗೆ ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಯಾಗಿದ್ದು ನಿಟ್ಟುಉಸಿರು ಬಿಡುವಂತಾಗಿದೆ,ಆದರೆ ಬಳೆಗಾರು ಮಾತ್ರ ನೀರಿಕ್ಷಿತ ಬೆಲೆ ಸಿಗುತ್ತಿಲ್ಲಾ ಎನ್ನುತ್ತಿದ್ದಾರೆ.

Leave a Reply

Your email address will not be published.