ಟಿಪ್ಪು ವಿರೋಧಿಗಳು ಯಾರು…? ಯಾಕೆ…..?


(ಈ ವರ್ಷ  ಟಿಪ್ಪು ಸುಲ್ತಾನ್ ಹೆಚ್ಚು ಚರ್ಚೆಯಲ್ಲಿದ್ದಾರೆ. ಎಡಪಂಥೀಯರು, ರಾಷ್ಟ್ರವಾದಿಗಳು ಟಿಪ್ಪುವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಬಲಪಂಥೀಯರು  ಮತ್ತು  ‘ಹಿಂದೂ’ ರಾಷ್ಟ್ರದ ಕನಸುಗಾರರು ಟಿಪ್ಪುವನ್ನು  ತೆಗಳಲು ಹೆಚ್ಚು ಸಮಯ ಖರ್ಚು ಮಾಡಿದ್ದಾರೆ. ಆದರೆ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪುವಿನ ವೀರಗಾಥೆ, ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಕೆದಕಿ ಚರ್ಚೆಯ ಅಲೆಗಳಿಗೆ ದಾರಿ ಮಾಡಿದ್ದಾರೆ. ಟಿಪ್ಪು ನಡೆಸಿದ ಯುದ್ಧಗಳ ಪರ, ವಿರೋಧದ ಚರ್ಚೆ ಜಾರಿಯಲ್ಲಿದೆ. ಹಲವರು ಮಾಧ್ಯಮಗಳನ್ನು ಬಳಸಿಕೊಂಡು ಪೇಪರ್ ಟೈಗರ್ ಗಳಂತೆ ಕಾದಾಡಿದ್ದಾರೆ.

ಇಂಥದರಲ್ಲಿ ಟಿಪ್ಪು ಬಗ್ಗೆ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದ್ದ ಸಂದೇಶವೊಂದು ಟಿಪ್ಪು ವಿರೋಧಿಗಳು ಯಾರು ಮತ್ತು ಯಾಕೆ ಎಂಬುದಕ್ಕೆ  ತರ್ಕ ಮತ್ತು ವಾಸ್ತವದ ನೆಲೆಯಲ್ಲಿ ಉತ್ತರ ನೀಡಿದೆ. ಅದನ್ನು ಆರೋಗ್ಯಕರ ಚರ್ಚೆಯ ಉದ್ದೇಶದಿಂದ ನಮ್ಮ ಓದುಗರ ಮುಂದೆ ಇಡುತ್ತಿದ್ದೇವೆ. )

ಟಿಪ್ಪು ವಿರೋಧಿಗಳು ಯಾರು ಮತ್ತು ಯಾಕೆ?
1. ಟಿಪ್ಪು ಉಳುವವನಿಗೆ ಭೂಮಿ ಎಂಬುದನ್ನು ಒಪ್ಪಿಕೊಂಡಿದ್ದ.ಕಾರಣ ದುಡಿಯದೆ ಉಣ್ಣುತ್ತಿದ್ದವರು ಅವನ ವಿರೋಧಿಗಳಾದರು.
2. ಟಿಪ್ಪು ಮಧ್ಯಪಾನ ವಿರೋಧಿಯಾಗಿದ್ದ, ಕಾರಣ ವಿಲಾಸಿಗಳು ಅವನ ವಿರೋಧಿಗಳಾದರು.
3. ಟಿಪ್ಪು ಕ್ಷಿಪಣಿಗಳನ್ನು ಅಭಿವೃದ್ಧಿಗೊಳಿಸಿದ್ದ, ಕಾರಣ ರಾಮಬಾಣವನ್ನೇ ಕ್ಷಿಪಣಿ ಎಂದು ಭಾವಿಸಿದ್ದವರು ವಿರೋಧಿಗಳಾದರು.
4. ಟಿಪ್ಪು ದಲಿತರ ಅದರಲ್ಲೂ ದಲಿತ ಮಹಿಳೆಯರ ಮಾನ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಕೊಂಡಿದ್ದ. ಕಾರಣ ದಲಿತರ ಶೋಷಣೆ ನಮ್ಮ ಹಕ್ಕು ಎಂದು ಭಾವಿಸಿದವರು ವಿರೋಧಿಗಳಾದರು.
5. ಟಿಪ್ಪು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ. ಕಾರಣ ಬ್ರಿಟಿಷರ ಪರವಾಗಿದ್ದವರು ವಿರೋಧಿಗಳಾದರು.
6. ಟಿಪ್ಪು ಕೋಮು ಸೌಹಾರ್ದತೆಗೆ ಪ್ರಯತ್ನಿಸಿದ, ಕಾರಣ ಕೋಮುವಾದಿಗಳು ಅವನ ವಿರೋಧಿಗಳಾದರು.
7. ಟಿಪ್ಪು ಪುರೋಹಿತಶಾಹಿಗಳ ವಿರುದ್ಧ ಸಿಡಿದೆದ್ದಿದ್ದ, ಕಾರಣ ಪುರೋಹಿತಶಾಹಿ ಪರಂಪರೆಯ ಹಿಂಬಾಲಕರು ಅವನ ವಿರೋಧಿಗಳಾದರು.
ಟಿಪ್ಪುವನ್ನು ವಿರೋಧಿಸುವವರ ಹಿನ್ನೆಲೆಯನ್ನು ಈಗಲೂ ಗಮನಿಸಬಹುದು. ಆಮೇಲೆ ಒಂದು ನಿರ್ಧಾರಕ್ಕೆ ಬರಬಹುದು. ಆಗ ಟಿಪ್ಪುವಿನ ಕೆಲವು ಸಾಧನೆಗಳಾದರೂ ನಮ್ಮ ಕಣ್ಣೆದುರು ಬಂದು ನಿಲ್ಲುತ್ತವೆ.

– ಪುರುಷೋತ್ತಮ ಬಿಳಿಮಲೆ

Leave a Reply

Your email address will not be published.