ಶಿಡ್ಲಘಟ್ಟ ಪಿಎಲ್ ಡಿ ಬ್ಯಾಂಕನ ಅಧ್ಯಕ್ಷರಾಗಿ ಭೀಮೇಶ್ ಅವಿರೋಧವಾಗಿ ಆಯ್ಕೆ

ಶಿಡ್ಲಘಟ್ಟದ ಭೂ ಅಭಿವೃಧ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಭೀಮೇಶ್ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು.

ಶಿಡ್ಲಘಟ್ಟ: ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಕಾಳನಾಯಕನಹಳ್ಳಿಯ ಭೀಮೇಶ್ ಅವಿರೋಧವಾಗಿ ಆಯ್ಕೆಯಾದರು.

ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಚೀಮನಹಳ್ಳಿ ಗೋಪಾಲ್ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿ ಭೀಮೇಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.

ಸಾಲಗಾರರ 12 ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕರು ಸೇರಿದಂತೆ (ಒರ್ವ ಸರಕಾರದಿಂದ ನಾಮ ನಿರ್ದೇಶಿತ ಸಹಿತ) 13 ಮಂದಿ ನಿರ್ದೇಶಕರನ್ನು ಹೊಂದಿರುವ ಪಿಎಲ್‍ಡಿ ಬ್ಯಾಂಕಿನಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್  ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಪಿಎಲ್‍ಡಿ ಬ್ಯಾಂಕಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಳನಾಯಕನಹಳ್ಳಿಯ ಭೀಮೇಶ್ ಹಾಗೂ ಹಿರಿಯ ನಿರ್ದೇಶಕ ರಾಯಪ್ಪನಹಳ್ಳಿಯ ಅಶ್ವತ್ಥನಾರಾಯಣರೆಡ್ಡಿ ಮಧ್ಯೆ ಪೈಪೋಟಿ ನಡಿದಿತ್ತಾದರೂ ಕೊನೆಯ ಘಳಿಗೆಯಲ್ಲಿ ನಿರ್ದೇಶಕರ ಸಲಹೆಯಂತೆ ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ವರಿಷ್ಠರು ಆಗಿರುವ ಮಾಜಿ ಸಚಿವ ವಿ.ಮುನಿಯಪ್ಪ ಭೀಮೇಶ್ ಹೆಸರು ಅಂತಿಮಗೊಳಿಸುವ ಮೂಲಕ ಯುವಕರಿಗೆ ಆದ್ಯತೆ ನೀಡಿದ್ದಾರೆ.

ಕನಸು ಭಗ್ನ: ಪಿಎಲ್‍ಡಿ ಬ್ಯಾಂಕಿನಲ್ಲಿ ಹಿರಿಯ ನಿರ್ದೇಶಕರಾಗಿರುವ ರಾಯಪ್ಪನಹಳ್ಳಿಯ ಅಶ್ವತ್ಥನಾರಾಯಣರೆಡ್ಡಿ ಈಗಾಗಲೇ 4 ಬಾರಿಗೆ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಮತ್ತೊಮ್ಮೆ ಅಂದರೆ 5ನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ನಡೆಸಿದ ಪ್ರಯತ್ನ ವಿಫಲವಾಗಿ ಅಧ್ಯಕ್ಷರಾಗುವ ಕನಸು ಭಗ್ನಗೊಂಡಿದೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರವಿ,ನಿರ್ದೇಶಕರಾದ ಬಂಕ್ ಮುನಿಯಪ್ಪ, ಮೇಲೂರು ಜಯದೇವ್, ಅಶ್ವತ್ಥನಾರಾಯಣ, ಶಿವಾರೆಡ್ಡಿ, ಚೀಮನಹಳ್ಳಿ ಗೋಪಾಲ್, ಶಂಕರ್, ರಮಾದೇವಿ, ಸಂಗಪ್ಪ, ಅಶ್ವತ್ಥನಾರಾಯಣರೆಡ್ಡಿ, ಭಾಗ್ಯಮ್ಮ,ಮೇಲೂರು ಮಯೂರ್,ಬ್ಯಾಂಕಿನ ವ್ಯವಸ್ಥಾಪಕ ಮುನಿಯಪ್ಪ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪಿಕಾರ್ಡ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಭೀಮೇಶ್ ಆಯ್ಕೆಯಾದರಿಂದ  ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಬ್ಯಾಂಕಿನ ಮುಂದೆ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿ ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಹೆಚ್.ಮುನಿಯಪ್ಪನವರ ಪರವಾಗಿ ಘೋಷಣೆಗಳನ್ನು ಕೂಗಿದರು.

ಹಾಪ್‍ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ,ಎಪಿಎಂಸಿ ನಿರ್ದೇಶಕ ಮೇಲೂರು ಮುರಳಿ, ಮಳ್ಳೂರು ಎಸ್.ಎಫ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ವೆಂಕಟರೆಡ್ಡಿ, ಶಿಡ್ಲಘಟ್ಟ ಎಸ್.ಎಫ್.ಸಿ.ಎಸ್ ಬ್ಯಾಂಕಿನ ಅಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಎನ್.ಮುನಿಯಪ್ಪ,ನಾರಾಯಣಸ್ವಾಮಿ,ತಾಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ್,ಚೀಮಂಗಲ ವೈಬಿ ಮಂಜುನಾಥ್,ತಾಪಂ ಮಾಜಿ ಉಪಾಧ್ಯಕ್ಷ ರಾಜು,ತಿಮ್ಮನಾಯಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆನಂದ್ ಇತರರು ಇದ್ದರು.

 

Leave a Reply

Your email address will not be published.