ನಮ್ಮ ಮೂತ್ರದ ವಿಶೇಷ ತಿಳಿಯಿರಿ, ಅದು ಆರೋಗ್ಯದ ಕನ್ನಡಿ!


ಮೂತ್ರ  ಕಟ್ಟಿಕೊಂಡಾಗಲೇ ಅದರ ಮಹತ್ವ ಗೊತ್ತಾಗುತ್ತದೆ. ಗಂಡು ಹುಡುಗರಾದರೆ ತುರ್ತಾಗಿ  ಎಲ್ಲೆಂದರಲ್ಲೇ  ನಿಸರ್ಗದ  ಕರೆಗೆ ಓಗೊಡುತ್ತಾರೆ.  ಹೆಣ್ಣು ಮಕ್ಕಳಿಗೆ ಸುರಕ್ಷತೆಯ  ಕಡೆಗೂ ಗಮನ ನೀಡಬೇಕಾದ  ಅನಿವಾರ್ಯತೆ  ಇರುತ್ತದೆ. ಮೂತ್ರ ಸರಿಯಾಗಿ ಮಾಡಿದರೆ ಮಾತ್ರ  ಆ ಮನುಷ್ಯ ಆರೋಗ್ಯವಂತ ಅನ್ನಬಹುದು.

ಈ  ಮೂತ್ರದ ವಿಶೇಷತೆ  ಏನು ಎಂಬ ಬಗ್ಗೆ ಕುತೂಹಲ ತಣಿಸಲು ಒಂದಿಷ್ಟು ಮಾಹಿತಿ ಹೊತ್ತು ತಂದಿದ್ದೇವೆ.

1) ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ ಏಳು ಬಾರಿ ಮೂತ್ರ ಮಾಡುತ್ತಾನೆ/ಳೆ. ಅದಕ್ಕಿಂತ ಕಡಿಮೆಯಾದರೆ ಆತನ/ಅವಳ ಆರೋಗ್ಯದಲ್ಲಿ ತೊಂದರೆ ಇದೆ ಎಂದು ಅರ್ಥ.

2) ಒಂದು ಬಾರಿ ಮೂತ್ರ ಮಾಡುವಾಗ ಅದು ಏಳು ಸೆಕೆಂಡುಗಳಷ್ಟಾದರೂ ನಿರಂತರತೆ  ಕಾಯ್ದುಕೊಳ್ಳಬೇಕು ,ಅದೇನಾದರೂ ಎರಡೇ ಸೆಕೆಂಡುಗಳಲ್ಲಿ ಪೂರ್ಣವಾದರೆ ಆ ವ್ಯಕ್ತಿ ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಅರ್ಥ.

3 ) ವಯಸ್ಕರ ಮೂತ್ರಕೋಶ 300-500 ಮಿ.ಲೀ ಮೂತ್ರ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತದೆ.

4) ರೋಮನ್ನರು ಹಲ್ಲು ತಿಕ್ಕಲು ಮೂತ್ರವನ್ನು ಬಳಸುತ್ತಿದ್ದರಂತೆ. ಏಕೆಂದರೆ ಮೂತ್ರದಲ್ಲಿರುವ ಅಮೋನಿಯಾ ಹಲ್ಲನ್ನು ಬಿಳಿ ಮಾಡುತ್ತದೆ ಎಂದು ಅವರು ತಿಳಿದಿದ್ದರು.  ಇದನ್ನು ತಿಳಿದ ಮೇಲೆ ಮೂತ್ರವನ್ನು ಉಪಯೋಗಿಸಬಹುದಾ ಎಂಬ  ಪ್ರಶ್ನೆ ಬೇಡ. ಮಾಹಿತಿ ನಮ್ಮದು, ಆಯ್ಕೆ ನಿಮ್ಮದು.

5) ಮೂತ್ರದ ಬಣ್ಣವು ನಿಮ್ಮ ಆರೋಗ್ಯವನ್ನು ತಿಳಿಸುವಲ್ಲಿ ಸಹಕಾರಿಯಾಗಿರುತ್ತದೆ.  ಮೂತ್ರದ ಬಣ್ಣ ಶುಭ್ರವಾಗಿದ್ದರೆ ನಿಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ‌ ನೀರಿನ ಸಂಗ್ರಹವಾಗಿದೆ ಎಂದು ಅರ್ಥವಾಗುತ್ತದೆ.  ಮೂತ್ರ ಸ್ವಲ್ಪ ಹಳದಿಯಾಗಿದ್ದರೆ ದೇಹಕ್ಕೆ  ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಇದೆ,   ಕಡು ಹಳದಿ ಬಣ್ಣಕ್ಕೆ ತಿರುಗಿದ್ದರೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ,  ಕಂದುಬಣ್ಣಕ್ಕೆ ತಿರುಗಿದ್ದರೆ ನೀವು ತೀವ್ರ ತರದ ಕರುಳಿನ ಸೋಂಕಿಗೆ ಒಳಗಾಗಿದ್ದೀರಿ,  ಅದೇ ರೀತಿ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ್ದರೆ ಸೊಂಕು ಅಥವಾ ಮೂತ್ರಪಿಂಡದ ಕಾಯಿಲೆ ಅಥವಾ  ಕ್ಯಾನ್ಸರ್ ಆಗಿರಬಹುದು ಎಂಬುದು ಒಂದು ಸೂಚನೆ. .

6) ನಿಮ್ಮ ಮೂತ್ರವೂ ಸಿಹಿಯಾದ ವಾಸನೆ ಹೊರಸೂಸುತ್ತಿದ್ದರೆ ನೀವು ಸಕ್ಕರೆ ಕಾಯಿಲೆಯಿಂದ ಬಳಳುತ್ತಿದ್ದೀರಿ ಎಂದು ಅರ್ಥ .

7) ನಿಮ್ಮ ಮೂತ್ರ ದುರ್ವಾಸನೆಯಿಂದ ಕೂಡಿದ್ದರೆ ಮೂತ್ರಪಿಂಡದಿಂದ ಗ್ಲೂಕೋಸ್ ಅಥವಾ ಪ್ರೋಟೀನ್ ಮೂತ್ರದ ಜೊತೆ ಹೊರಬರುತ್ತಿದೆ ಎಂದು ಅರ್ಥ .

8) ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧ ಇವೆ. ಅದರಲ್ಲಿ ಮೊದಲನೇ ಪ್ರಕಾರ  ಹಾಗೂ ಎರಡನೇ ಪ್ರಕಾರ  ಎಂಬುದಾಗಿ ಕ್ರಿ.ಪೂ ೫೦೦ ರಲ್ಲಿ ಭಾರತೀಯ ವೈದ್ಯರಾದ ಚರಕ ಹಾಗೂ ಶುಶ್ರೂತರು ವಿಂಗಡಿಸಿದ್ದರು.

9) ನಿಮ್ಮ ಮೂತ್ರದಲ್ಲಿ ಸೋಡಿಯಂ, ಪೊಟ್ಯಾಸಿಯಂ ಹಾಗೂ ಕ್ಲೋರೈಡ್ ನಂತಹ  ೩೦೦೦ ಅಂಶಗಳಿವೆ.

10)  ನೀವು ಚಹಾ ,ಕಾಫಿ ಅಥವಾ  ಖಾರದ ತಿನಿಸುಗಳನ್ನು ತಿಂದಾಗ ನಿಮ್ಮ ಮೂತ್ರದ ವಾಸನೆಯಲ್ಲೂ ವ್ಯತ್ಯಾಸಗಳಾಗುತ್ತವೆ.

11) ಸುಮಾರು  100 ವರ್ಷಗಳ ಹಿಂದೆ ಗನ್ ಪೌಡರ್ ಗಳನ್ನು ತಯಾರಿಸಲು ಮನುಷ್ಯನ ಮೂತ್ರವನ್ನು ಬಳಸಲಾಗುತ್ತಿತ್ತು .

12) ಬೀರ್ ಗ್ರಿಲ್ಸ್ ಹಾಗೂ ಮೊರಾರ್ಜಿ ದೇಸಾಯಿ ತಮ್ಮ ಮೂತ್ರವನ್ನು ತಾವೇ ಕುಡಿಯುವುದಕ್ಕೆ ಪ್ರಸಿದ್ಧರಾಗಿದ್ದರು. ಮೂತ್ರ ಕುಡಿದರೆ ಸೌಂದರ್ಯ ವರ್ಧನೆಯಾಗುತ್ತದೆ ಹಾಗೂ ಚಿರಯೌವ್ವನ‌ರಾಗಿ ಇರುತ್ತಾರೆ ಎಂಬ ನಂಬಿಕೆಯೂ ಇದಕ್ಕೆ ಕಾರಣ. (ಹಾಗಂತಾ ಮೂತ್ರ ಕುಡಿಬೇಡಿ ಮಾರಾಯ್ರೆ !)

13)  ನಿಮಗೆ ಎಲ್ಲಿಯೂ ನೀರೇ ಸಿಗದಾದಾಗ ಮೂತ್ರ ಕುಡಿದೂ ಬದುಕಬಹುದು ಯಾಕೆಂದರೆ ಅದರಲ್ಲಿ ಅತ್ಯಂತ ಪ್ರಮಾಣದ ಉಪ್ಪು ಇರುವುದರಿಂದ ಅದು ಬಾಯಾರಿಕೆಯನ್ನು ಹೋಗಲಾಡಿಸುತ್ತದೆಯಂತೆ !

14) ರೋಮನ್ನರು ಬಟ್ಟೆ ತಯಾರಿಸಿ ಬಣ್ಣ ಹಾಕುವಾಗ  (ಡೈಯಿಂಗ್)  ಮೂತ್ರವನ್ನು ಬಳಕೆ ಮಾಡುತ್ತಿದ್ದರಂತೆ.

15) ತುಂಬಾ ಜನರು ಇರುವಾಗ ನಾಚಿಗೆಯಿಂದ ಮೂತ್ರ ಮಾಡಲಾಗದಂತಹ ಸ್ಥಿತಿಯನ್ನು ಪಾರಾರಿಸಿಸ್ ಅನ್ನುತ್ತಾರೆ .

16)  ರೋಮನ್ ಆಡಳಿತಗಾರ ನ್ಯೂರೋ ಮೂತ್ರದ ಮೇಲೂ ತೆರಿಗೆ ವಿಧಿಸಿದ್ದನಂತೆ. ಇದರಿಂದ ಬೊಕ್ಕಸ ತುಂಬಿಸಬಹುದೆಂಬ ಯೋಚನೆ ಅವನದಾಗಿತ್ತು .

17) ಸಾರ್ವಜನಿಕ ಈಜುಕೊಳಗಳು ಅಧಿಕ ಕ್ಲೋರಿನ್ ವಾಸನೆ ಸೂಸುತ್ತಿದ್ದರೆ ಆ ಕೊಳದಲ್ಲಿ ಕ್ಲೋರಾಮಿನ್ ಹಾಗೂ ಮಾನವನ ಮೂತ್ರ ಮಿಶ್ರಣಗೊಂಡಿದೆ ಎಂದು ಅರ್ಥ.

18) ಮೊದಲನೇ ವಿಶ್ವಯುದ್ಧದ ಸಂಧರ್ಭ ಕೆನಡಾ ದೇಶದ ಸೈನಿಕರು ತಮ್ಮ ಮೂತ್ರದಲ್ಲಿ ಕಾಲುಚೀಲಗಳನ್ನು ಅದ್ದಿ ತಮ್ಮ ಮುಖಕ್ಕೆ ಕಟ್ಟಿಕೊಂಡು ಗ್ಯಾಸ್ ಮಾಸ್ಕ್ ಗಳಾಗಿ ಬಳಸಿ ಯುದ್ಧ ಮಾಡುತ್ತಿದ್ದರಂತೆ .ಮೂತ್ರದಲ್ಲಿರುವ ಅಮೋನಿಯಾ, ಕ್ಲೋರಿನ್ ಅನ್ನು ಕರಗಿಸಿ ಅವರಿಗೆ ಉಸಿರಾಡಲು ಸಹಾಯ ಮಾಡುತ್ತಿತ್ತಂತೆ.

19) ರೋಮ್ ನ ಮಹಿಳೆಯರು ತಮ್ಮ ಮೂತ್ರ ಸುವಾಸನೆಯಿಂದ ಕೂಡಿರಬೇಕು ಎಂದು ಟರ್ಪೆಂಟೈನ್ ಅನ್ನು ಕುಡಿಯುತ್ತಿದ್ದರಂತೆ .

20) ಇ3 ಟೆಕ್ನಾಲಜೀಸ್ ಎಂಬ ಕಂಪನಿಯು ಮೂತ್ರದಿಂದ ವಿದ್ಯುತ್ ಉತ್ಪಾದನೆ ಆರಂಭಿಸಿದೆ. .

21) ಬೆಳಿಗ್ಗೆ ಎದ್ದ ಕೂಡಲೇ ಮಾಡುವ ಮೂತ್ರವು  ಆಮ್ಲದ ಅಂಶವನ್ನು ಹೊಂದಿರುತ್ತದೆ. .ಮೂತ್ರವು ದೇಹದಲ್ಲಿರುವ ಆಮ್ಲದ ಅಂಶವನ್ನು ಹೊರ ಹಾಕುವಲ್ಲೂ ಸಹಕಾರಿ.

22)  ಮಹಿಳೆಯ ದೇಹ ಮೂತ್ರ ಹೊರ ಹಾಕಲು ಪುರುಷನ ದೇಹಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

23)  ಮಗುವು ಗರ್ಭದಲ್ಲಿರುವಾಗಲೇ ಮೂತ್ರ ಮಾಡುತ್ತದೆ. ಆದರೆ ಅದು ಆಮ್ನಿಯೋಟಿಕ್ ಪ್ಲುಯಿಡ್ ರೂಪದಲ್ಲಿರುತ್ತದೆ.

24)  ಕಾಲುಗಳು ಒದ್ದೆಯಾಗುತ್ತದೆ ಎಂಬ ಏಕಮಾತ್ರ ಕಾರಣದಿಂದ ನಾಯಿ ಕಾಲು ಎತ್ತಿ ಮೂತ್ರ ಮಾಡುತ್ತದೆ. ಮನುಷ್ಯನ ದೇಹ ರಚನೆ ಮೂತ್ರ ಮಾಡಲು ಅನುಕೂಲವಾಗಿರುವುದರಿಂದ  ಕಾಲೆತ್ತುವ ಅವಶ್ಯಕತೆ ಇರುವುದಿಲ್ಲ .

(- ಸ್ಯಾಂತು……)

Leave a Reply

Your email address will not be published.