ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯ: ರಾಘವೇಂದ್ರ ತಳವಾರ


ಚಳ್ಳಕರೆ: ಒಂದಿಲ್ಲೊಂದು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂದಾಯ ಇಲಾಖೆ ನೌಕರರು ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯಕ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ ತಳವಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಕಂದಾಯ ಇಲಾಖೆ ನೌಕರರಿಗಾಗಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ನೌಕರರು ತಮ್ಮ ಕಾರ್ಯ ಚಟವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು  ಕ್ರೀಡಾಕೂಟಗಳು  ಸಹಕಾರಿ. ಸೋಲು, ಗೆಲವು ಎರಡು ನಾಣ್ಯದ ಮುಖಗಳಿದ್ದಂತೆ ಎರಡನ್ನು ಮಾನವಾಗಿ ಸ್ವೀಕರಿಗೆ ಪ್ರತಿಯೊಬ್ಬರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಿಳಿಸಿದರು.

ತಹಸೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ಕಂದಾಯ ಇಲಾಖೆಗೆ ದಿನಕ್ಕೆ ನೂರಕ್ಕು ಹೆಚ್ಚು ಜವರು ವೃದ್ದಾಪ್ಯ, ವಿಧವಾ, ಜನನ ಮರಣ ಪ್ರಣಾಣ ಪತ್ರ, ಪಹಣಿ, ಭೂ ವಿವಾದ ಸೇರಿದಂತೆ ಹಲವು ಯೋಜನೆಗಳನ್ನು ಪಡೆಯಲು ಬರುತ್ತಾರೆ ಅವರದೊಂದಿಗೆ ಉತ್ತಮ ಭಾಂದ್ಯವ ಬೆಳೆಸುವ ಜತೆಗೆ ಮನಸ್ಸು ಹಿಡಿತದಲ್ಲಿಟ್ಟುಕೊಳ್ಳಲು ಕ್ರೀಡಾಕೂಟ ಅವಶ್ಯ ಎಂದರು.

ಉಪವಿಭಾಗಾಧಿಕಾರಿ ರಾಘವೇಂದ್ರತಳವಾರ್ ಬ್ಯಾಟಿಂಗ್ ಆಡಿದರೆ ತಹಸೀಲ್ದಾರ್ ಕಾಂತಾಜ್ ಬೌಲಿಂಗ್ ಮಾಡುವ ಮಾಡುವ ಮೂಲಕ ಕಂದಾಯ ಇಲಾಖೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಮೆರಗು ತುಂಬಿದಿರು.

ಕ್ರೀಡಾಕೂಟದಲ್ಲಿ ಚಿತ್ರದುರ್ಗ ತಹಸೀಲ್ದಾರ್ ಮಲ್ಲಿಕಾರ್ಜುನ, ತಳಕು, ನಾಯಕನಹಳ್ಳಿ, ಕಸಬಾ ಹಾಗೂ ಪರಶುರಾಂಪುರ ಕಂದಾಯ ನಿರೀಕ್ಷದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published.