ಇತಿಹಾಸ ಅರಿತರೆ ಭವಿಷ್ಯ: ಶೋಷಣೆ ಮುಕ್ತ ಸಮಾಜಕ್ಕಾಗಿ ಬ್ರಿಟಿಷ್ ಕಾಲದ ಪ್ರಯತ್ನಗಳು


  ಇತಿಹಾಸ ಅರಿಯದವರಿಗೆ ಭವಿಷ್ಯವೂ ಇಲ್ಲ ಎಂಬುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಸಿದ್ಧ ಮಾತು. ಇತಿಹಾಸದ ಮಾತು ಬಂದಾಗ ಭಾರತವನ್ನು ಆಳಿದವರ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಭಾರತವನ್ನು ಆಳಿದವರು ದೇಶಕ್ಕೆ ನೀಡಿದ ಕೊಡುಗೆ ಏನು,  ಸ್ಥಳೀಯವಾಗಿ ಏನು ಬದಲಾವಣೆ ಆಯಿತು  ಎಂಬುದು ವಿವಾದಕ್ಕೆ ಎಳೆಸಿದ್ದೂ ಇದೆ. ಅದಾಗ್ಯೂ ಭಾರತದಲ್ಲಿ ಬ್ರಿಟಿಷರ ಆಡಳಿತ ಕಾಲದ  ಕೊಡುಗೆಗಳು ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ  ವ್ಯವಸ್ಥೆಯ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತವೆ ಅನ್ನೋದರಲ್ಲಿ ಸಂಶಯವೇ ಇಲ್ಲ.

  ಭಾರತಕ್ಕೆ ಬ್ರಿಟಿಷರ  ಕೊಡುಗೆಗಳಿಂದ ಆದ ಲಾಭ ಏನು? ನಷ್ಟ ಏನೇನು? ಬ್ರಿಟಿಷ್ ಆಡಳಿತದ ಪ್ರಭಾವ ಏನು ಎಂಬುದರ ವಿಚಾರ ವಿಮರ್ಶೆ ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಬ್ರಿಟಿಷ್ ಆಡಳಿತದಲ್ಲಿ  ಜಾರಿಗೊಂಡ ಹಲವು ಕಾನೂನುಗಳು, ಯೋಜನೆಗಳು, ಅದರಿಂದಾದ ಬದಲಾವಣೆಗಳ ಮಾಹಿತಿ ಅರಿತರೆ ದೇಶದ ಇತಿಹಾಸವೂ  ಪರಿಚಯವಾಗುತ್ತದೆ. ಇತಿಹಾಸದ  ತಿಳಿವಳಿಕೆ ಬೇಕು ಎನ್ನುವವರು ಈ ಬರೆಹವನ್ನು ಗಮನಿಸಬೇಕು ಎಂಬುದು ನಮ್ಮ ಆಶಯವಾಗಿದೆ.

 1. ಈಸ್ಟ್ ಇಂಡಿಯಾ ಕಂಪನಿಯು 1773 ರಲ್ಲಿ ರೆಗ್ಯುಲೇಟಿಂಗ್ ಆ್ಯಕ್ಟ್ ಪಾಸು ಮಾಡಿತು. ಇದರಲ್ಲಿ ನ್ಯಾಯ ವ್ಯವಸ್ಥೆಯು ಸಮಾನತೆಯ ಆಧಾರದ ಮೇಲೆ ಇರಬೇಕು ಎಂದು ಹೇಳಲಾಯಿತು.
 2. ಬ್ರಿಟಿಷರು 1795 ರಲ್ಲಿ ಅಧಿನಿಯಮ 11 ರ ಮೂಲಕ ಶೂದ್ರರಿಗೂ ಸಂಪತ್ತು ಗಳಿಸುವ ಮತ್ತು ಕೂಡಿ ಇಡುವ ಕಾನೂನು ರೂಪಿಸಿದರು.
 3. ಅಧಿನಿಯಮ 3ರ ಮೂಲಕ 1804 ರಲ್ಲಿ ಹೆಣ್ಣು ಹತ್ಯೆಯನ್ನು ನಿಷೇಧಿಸಲಾಯಿತು. (ಹೆಣ್ಣು ಮಗು ಜನಿಸಿದ ಕೂಡಲೆ ಅಫೀಮು ನೀಡಿ ಅಥವಾ ತಾಯಿಯ ಸ್ಥನಗಳಿಗೆ ದತ್ತೂರಿಯ ಲೇಪನ ಹಚ್ಚಿ, ಮಗು ಪ್ರಜ್ಞೆ ತಪ್ಪಿದ ಮೇಲೆ ಒಂದು ಗುಂಡಿಯಲ್ಲಿ ಹಾಲನ್ನು ಹಾಕಿ ಹೆಣ್ಣು ಮಗುವನ್ನು ಮುಳುಗಿಸಿ ಕೊಲ್ಲುತ್ತಿದ್ದರು.)
 4. ಬ್ರಿಟಿಷ್ ಸರ್ಕಾರ 1813 ರಲ್ಲಿ ಎಲ್ಲ ಜಾತಿ ಮತ್ತು ಧರ್ಮದವರಿಗೆ ಶಿಕ್ಷಣದ ‍ಅಧಿಕಾರ ನೀಡಿತು.
 5. ಬ್ರಿಟಿಷ್ ಸರ್ಕಾರ 1813 ರಲ್ಲಿ ಜೀತ ಪದ್ದತಿಯ ನಿರ್ಮೂಲನೆಗಾಗಿ ಕಾನೂನು ರೂಪಿಸಿತು.
 6. ಅಧಿನಿಯಮ 7ರ ಮೂಲಕ 1819 ರಲ್ಲಿ ಬ್ರಾಹ್ಮಣರಿಂದ ಶೂದ್ರ ಮಹಿಳೆಯರ ಶುದ್ಧೀಕರಣದ ಮೇಲೆ ನಿರ್ಬಂಧ ಹೇರಲಾಯಿತು.(ಶೂದ್ರರ ಮದುವೆ ನಂತರ ಮದುಮಗಳು ಗಂಡನ ಮನೆ ಸೇರುವ ಮುನ್ನ ಕನಿಷ್ಠ ಮೂರು ರಾತ್ರಿ ಬ್ರಾಹ್ಮಣರ ಮನೆಯಲ್ಲಿ ದೇಹ ಸೇವೆ ನೀಡಬೇಕಿತ್ತು.)
 7. ಡಿಸೆಂಬರ್‍ 1829 ರಲ್ಲಿ ನಿಯಮ 17ರ ಮೂಲಕ ವಿಧವೆಯರನ್ನು ಜೀವಂತ ಸುಡುವುದನ್ನು ನಿಷೇಧಿಸಿ ಸತಿ ಸಹಗಮನ ಪದ್ಧತಿಯನ್ನು ಕೊನೆಗೊಳಿಸಲಾಯಿತು.
 8. ನರ ಬಲಿ ಸಂಪ್ರದಾಯವನ್ನು 1830ರಲ್ಲಿ ನಿಲ್ಲಿಸಲಾಯಿತು. (ದೇವರುಗಳನ್ನು ಒಲಿಸಿಕೊಳ್ಳಲು ಬ್ರಾಹ್ಮಣರು ಶೂದ್ರ ಸ್ತ್ರೀ ಪುರುಷ ರನ್ನು ಮಂದಿರಗಳಲ್ಲಿ ತಲೆ ಬಡಿದು ಬಡಿದು ಸಾಯುವಂತೆ ಮಾಡಿ ಬಲಿ ನೀಡುತ್ತಿದ್ದರು.)
 9. ಅಧಿನಿಯಮ 87 ರ ಮೂಲಕ 1833 ರಲ್ಲಿ ಸರಕಾರಿ ನೌಕರಿಗಳಲ್ಲಿ ತಾರತಮ್ಯ ಕೊನೆಗೊಳಿಸಿ ಯೋಗ್ಯತೆಯ ಆಧಾರದ ಮೇಲೆ ನೌಕರಿ ನೀಡಲು ನಿಯಮ ರೂಪಿಸಲಾಯಿತು. ಯಾವುದೇ ಭಾರತೀಯ ನಾಗರಿಕನಿಗೆ ಜನ್ಮಸ್ಥಳ, ಧರ್ಮ, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಕಂಪನಿಯ ಉನ್ನತ ಸ್ಥಾನಗಳನ್ನು ನಿರಾಕರಿಸುವಂತಿಲ್ಲ ಎಂದು ಹೇಳಲಾಯಿತು.
 10. ಮೊದಲ ಭಾರತೀಯ ವಿಧಿ ಆಯೋಗ 1834 ರಲ್ಲಿ ಸ್ಥಾಪನೆಯಾಯಿತು. ಜಾತಿ, ವರ್ಣ, ಧರ್ಮ ಮತ್ತು ಕ್ಷೇತ್ರ ಮುಂತಾದ ಅಂಶಗಳನ್ನು ಬದಿಗೊತ್ತಿ ಸಮಾನತೆಯ ಆಧಾರದ ಮೇಲೆ ಕಾನೂನು ವ್ಯವಸ್ಥೆ ರೂಪಿಸುವುದು ಈ ಆಯೋಗದ ಮುಖ್ಯ ಉದ್ದೇಶವಾಗಿತ್ತು.
 11. ಪ್ರಥಮ ಗಂಡು ಸಂತಾನವನ್ನು ಗಂಗೆಗೆ ದಾನ ಮಾಡುವುದರ ಮೇಲೆ 1835 ರಲ್ಲಿ ಪ್ರತಿಬಂಧ ಹೇರಲಾಯಿತು. (ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಚೊಚ್ಚಿಲು ಮಗು ಗಂಡು ಜನಿಸಿದರೆ ಅದನ್ನು ಗಂಗಾ ನದಿಯಲ್ಲಿ ಎಸೆಯಬೇಕು ಎಂದು ನಿಯಮ ಹೇರಿದ್ದರು. ಮೊದಲ ಗಂಡು ಮಗು ದಷ್ಟ ಪುಷ್ಟ ಹಾಗೂ ಆರೋಗ್ಯವಂತ ಆಗಿದ್ದರೆ ಅದು ಮುಂದೆ ಬ್ರಾಹ್ಮಣರ ವಿರುದ್ಧ ಹೋರಾಟ ಮಾಡೀತು ಎಂದು ಜನಿಸಿದ ಕೂಡಲೇ ಗಂಗೆಗೆ ದಾನ ಮಾಡಿಸಲಾಗುತ್ತಿತ್ತು.)
 12. ಲಾರ್ಡ್ ಮೆಕಾಲೆ 7ನೇ ಮಾರ್ಚ್ 1835 ರಲ್ಲಿ ಶಿಕ್ಷಣದ ನೀತಿಯನ್ನು ರಾಜ್ಯ ವಿಷಯವನ್ನಾಗಿ ಮತ್ತು ಇಂಗ್ಲೀಷ ಭಾಷೆಯನ್ನು ಉಚ್ಚ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದರು.
 13. 1835 ರಲ್ಲಿ ಶೂದ್ರರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಿ ಬ್ರಿಟಿಷರು  ಕಾನೂನು ರೂಪಿಸಿದರು. ಇದೊಂದು ಐತಿಹಾಸಿಕ ನಿರ್ಣಯ ಎಂದು ಅಂದು ಅದನ್ನು ಕರೆಯಲಾಯಿತು.
 14. ಬ್ರಿಟಿಷರು ದೇವದಾಸಿ ಪದ್ಧತಿಯನ್ನು 1836 ರಲ್ಲಿ ನಿಷೇಧಿಸಿದರು. ಬ್ರಾಹ್ಮಣರು ಹೇಳಿದಾಗ ಶೂದ್ರ ತನ್ನ ಮಗಳನ್ನು ಮಂದಿರ ಸೇವೆಗಾಗಿ ಬಿಡಬೇಕಾಗಿತ್ತು. ಮಂದಿರದ ಅರ್ಚಕರು ಆಕೆಯನ್ನು ಶಾರೀರಿಕವಾಗಿ ಶೋಷಣೆ ಮಾಡುತ್ತಿದ್ದರು. ಈ ಸಂಬಂಧದಿಂದ ಜನಿಸಿದ ಮಗುವನ್ನು ಎಸೆಯಲಾಗುತ್ತಿತ್ತು. ಅಂಥ ಸಂತಾನವನ್ನು ಹರಿಜನ ಎಂದು ಕರೆಯಲಾಗುತ್ತಿತ್ತು.
 15. ಜೆ.ಇ.ಡಿ. ಬೆಟನ್ 1849 ರಲ್ಲಿ ಕಲ್ಕತ್ತಾದಲ್ಲಿ ಒಂದು ಮಹಿಳಾ ಕಾಲೇಜು ಸ್ಥಾಪಿಸಿದನು. ಮಹಿಳೆಯರಿಗೆ ಉನ್ನತ ಶಿಕ್ಷಣ ದೊರೆಯಬೇಕು ಎಂಬುದು ಕಾಲೇಜು ಸ್ಥಾಪನೆಯ ಉದ್ದೇಶವಾಗಿತ್ತು.
 16. 1854 ರಲ್ಲಿ ಮೂರು ಕಡೆ ವಿಶ್ವವಿದ್ಯಾಲಯಗಳನ್ನು ಬ್ರಿಟಿಷರು ತೆರೆದರು. ಕಲ್ಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಯಿತು. 1902 ರಲ್ಲಿ ವಿಶ್ವವಿದ್ಯಾಲಯ ಆಯೋಗ ರಚಿಸಲಾಯಿತು.
 17. ಅಕ್ಟೋಬರ್ 06, 1860 ರಲ್ಲಿ ಬ್ರಿಟಿಷರು ಇಂಡಿಯನ್ ಪೆನಲ್ ಕೋಡ್ ರಚಿಸಿದರು.
 18. 1863 ರಲ್ಲಿ ಚರಕ ಪೂಜೆಯನ್ನು ನಿಷೇಧಿಸಲಾಯಿತು. ಈ ಪೂಜೆಯ ಉದ್ದೇಶವೆಂದರೆ ಭವ್ಯ ಬಂಗಲೆ ಹಾಗೂ ಸೇತುವೆಗಳು ದೀರ್ಘ ಬಾಳಿಕೆ ಬರಲಿ ಎಂಬುದಾಗಿತ್ತು ಮತ್ತು ಇದಕ್ಕಾಗಿ ಶೂದ್ರರನ್ನು ಹಿಡಿದು ಬಲಿ ಕೊಡಲಾಗುತ್ತಿತ್ತು.

19  ಬಹು ವಿವಾಹ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ನಿಷೇಧಿಸುವ ಉದ್ದೇಶದಿಂದ . 1867 ರಲ್ಲಿ ಬಂಗಾಳ ಸರ್ಕಾರ ಒಂದು ಸಮಿತಿಯನ್ನು ರಚಿಸಿತು.

 1. 1871 ರಲ್ಲಿ ಬ್ರಿಟಿಷರು ಜಾತಿ ಗಣನೆ ಆರಂಭಿಸಿದರು. ಅದು 1941 ರವರೆಗೆ ನಡೆಯಿತು. 1948 ರಲ್ಲಿ ನೆಹರು ಕಾನೂನು ರೂಪಿಸಿ ಜಾತಿ ಗಣನೆಯನ್ನು ನಿಲ್ಲಿಸಿದರು.
 2. 1872 ರಲ್ಲಿ ಸಿವಿಲ್ ಮಾರೇಜ್ ಆ್ಯಕ್ಟ್ ಮೂಲಕ 14 ವರ್ಷ ವಯಸ್ಸಿನ ಹೆಣ್ಣು ಮತ್ತು 18 ವರ್ಷ ವಯಸ್ಸಿನ ಒಳಗಿನ ವಿವಾಹವನ್ನು ನಿಷೇಧಿಸಿ ಬಾಲ್ಯ ವಿವಾಹ ಪದ್ಧತಿಯನ್ನು ಕೊನೆಗೊಳಿಸಿದರು.
 3. ಬ್ರಿಟಿಷರು ಮಹಾರ್ ಮತ್ತು ಚಮ್ಮಾರ್ ರೆಜಿಮೆಂಟ್ ರಚಿಸಿ ಈ ಜಾತಿ ಯುವಕರನ್ನು ಸೇನೆಯಲ್ಲಿ ಭರ್ತಿ ಮಾಡಿದರು. 1892 ರಲ್ಲಿ ಬ್ರಾಹ್ಮಣರ ಒತ್ತಡದಿಂದಾಗಿ ಈ ಭರ್ತಿಗಳನ್ನು ನಿಲ್ಲಿಸಲಾಯಿತು.
 4. ಬ್ರಿಟಿಷ ಸರಕಾರ 1918 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೌತ್ ಬರೊ ನೇತೃತ್ವದ ಕಮೀಟಿಯನ್ನು ಕಳಿಸಿಕೊಟ್ಟಿತು.
 5. 1919 ರಲ್ಲಿ ಬ್ರಿಟಿಷರು ಬ್ರಾಹ್ಮಣರಲ್ಲಿ ನ್ಯಾಯಪರತೆಯ ಚರಿತ್ರೆ ಇರುವುದಿಲ್ಲ ಎಂದು ಹೇಳಿ ಅವರು ನ್ಯಾಯಾಧೀಶರಾಗುವುದನ್ನು ನಿರ್ಬಂಧಿಸಿದರು.
 6. 1927 ರಲ್ಲಿ ಬ್ರಿಟಿಷರು ಶೂದ್ರರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಾಧಿಕಾರ ನೀಡಿ ಕಾನೂನು ರೂಪಿಸಿದರು.
 7. ನವೆಂಬರ್‍ 1927 ರಲ್ಲಿ ಭಾರತೀಯರಿಗೆ ಹೆಚ್ಚಿನ ಆಧಿಕಾರ ನೀಡುವ ಸಲುವಾಗಿ ಸೈಮನ್ ಕಮಿಷನ್ ರಚಿಸಿತು. ಆದರೆ ಗಾಂಧೀಜಿ ಚಳುವಳಿ ಮಾಡಿ ಸೈಮನ್ ಕಮಿಷನ್ ವಾಪಸ್ ಹೋಗುವಂತೆ ಮಾಡಿದರು.
 8. ಸೆಪ್ಟೆಂಬರ್‍ 1932 ರಲ್ಲಿ ಬ್ರಿಟಿಷರು 1. ವಯಸ್ಕರಿಗೆ ಮತಾಧಿಕಾರವನ್ನು ನೀಡಿದರು. 2. ವಿಧಾನ ಮಂಡಲ ಮತ್ತು ಸಂಘ ಸಂಸ್ಥೆಗಳಲ್ಲಿ ಜನಸಂಖ್ಯಾನುಸಾರ ಅಸ್ಪೃಶ್ಯರಿಗೆ ಮೀಸಲಾತಿಯನ್ನು ಜಾರಿಗೆ ತಂದರು. 3. ಸಿಖ್ಖರು ಮತ್ತು ಮುಸ್ಲಿಮರಂತೆ ಅಸ್ಪೃಶ್ಯರಿಗೂ ಸ್ವತಂತ್ರ ಚುನಾವಣಾ ಕ್ಷೇತ್ರಗಳಿಂದ ಚುನಾಯಿತರಾಗುವ ಅಧಿಕಾರ ನೀಡಿದರು. ಅಸ್ಪೃಶ್ಯ ಪ್ರತಿನಿಧಿಯನ್ನು ಅಸ್ಪೃಶ್ಯ ಮತದಾರರು ಮಾತ್ರ ಮತ ನೀಡಿ ಚುನಾಯಿಸುವ ಅಧಿಕಾರ ನೀಡಿದರು. 4. ಅಸ್ಪೃಶ್ಯರಿಗೆ ದ್ವಿ ಮತದಾನದ ಅಧಿಕಾರ ನೀಡಿದರು. ಒಂದು ಮತ ತಮ್ಮ ಸಮುದಾಯದ ಅಭ್ಯರ್ಥಿಗೆ ಮತ್ತು ಇನ್ನೊಂದು ಮತವನ್ನು ಸಾಮಾನ್ಯ ಅಭ್ಯರ್ಥಿಗೆ ನೀಡುವ ಅಧಿಕಾರ ನೀಡಿದರು.
 9. ಬ್ರಿಟಿಷರು 01 ಜುಲೈ 1942 ರಿಂದ 10 ಸೆಪ್ಟೆಂಬರ್‍ 1946 ರವರೆಗೆ ಅಂಬೇಡ್ಕರ್‍ ಅವರನ್ನು ವೈಸರಾಯ್ ಕಾರ್ಯಪಡೆ ಕೌನ್ಸಿಲ್ ನಲ್ಲಿ ಕಾರ್ಮಿಕ ಸದಸ್ಯರನ್ನಾಗಿ ನೇಮಿಸಿದರು.
 10. 1937 ರಲ್ಲಿ ಬ್ರಿಟೀಷರು ಪ್ರಾಂತೀಯ ಸರಕಾರಗಳ ಚುನಾವಣೆ ನಡೆಸಿದರು.
 11. 1942 ರಲ್ಲಿ ಡಾ. ಅಂಬೇಡ್ಕರ್ ಅವರು 50 ಸಾವಿರ ಹೆಕ್ಟೇರ್ ಭೂಮಿಯನ್ನು ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
 12. ಬ್ರಿಟಿಷರು ಶಾಸನ ಮತ್ತು ಪ್ರಶಾಸನದಲ್ಲಿ ಬ್ರಾಹ್ಮಣರಿಗಿದ್ದ ಶೇ 100 ರಷ್ಟು ಪಾಲನ್ನು ಶೇ 2.5 ರಷ್ಟಕ್ಕೆ ಇಳಿಸಿ ಬಿಟ್ಟರು.

ಇಂತಹ ಹಲವು ಕಾರಣಗಳಿಂದ  ಮೇಲ್ವರ್ಗದವರು ಬ್ರಿಟಿಷರ ವಿರುದ್ಧ ಆಂದೋಲನ ಆರಂಭಿಸಿದರು. ಬ್ರಿಟಿಷರು ಅಸ್ಪೃಶ್ಯರಿಗೆ ಮತ್ತು ಎಲ್ಲಾ ವರ್ಗಗಳಿಗೆ ಸಮಾನಾಧಿಕಾರ ನೀಡಿ ಸಮಾಜದಲ್ಲಿ ಸಮಾನತೆ ಬರಬೇಕೆಂದು ಆಶಿಸಿ ಬದಲಾವಣೆ ತಂದರು.   ಈ ಬದಲಾವಣೆಯ ಹಿಂದೆ ದೇಶಿಯ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಹಂಬಲಿಸುತ್ತಿದ್ದ ಮಾನವೀಯ ಹೃದಯಗಳಿದ್ದವು ಎಂಬುದು ಗಮನಾರ್ಹ.

(ಮುತ್ತು)

One Response to "ಇತಿಹಾಸ ಅರಿತರೆ ಭವಿಷ್ಯ: ಶೋಷಣೆ ಮುಕ್ತ ಸಮಾಜಕ್ಕಾಗಿ ಬ್ರಿಟಿಷ್ ಕಾಲದ ಪ್ರಯತ್ನಗಳು"

 1. Basavaraj S H   December 12, 2017 at 9:58 pm

  ಆದರ್ಶಗಳನ್ನು ಅಡ್ಡ ದಾರಿಯಿಲ್ಲಿಟ್ಟು
  ಮಾನವೀಯ ಮೌಲ್ಯಗಳ ಜೋತೆ ಆಟ ಆಡಿದವರು ಇನ್ನು ಇರುವುದರಿಂದ ಜನರ ಬದುಕನ್ನು ತನ್ನ ಸ್ವಾರ್ತಕ್ಕಾಗಿ ಬಳಸಿದವರಿಗೆ ಇತಿಹಾಸದ ಮರುಚಿಕೆ ಬೇಕಾಗಿಲ್ಲ,
  ಅವರದೇ ಮೌಡ್ಯ ಫರಂಪರೆ ತೋರಿಸಲು ಮುಂದಾಗುವರು ಧರ್ಮ ಸಂಸದ ಎಂದು ಹೇಳಿ ತಿನ್ನು ಅನ್ನದೊಳಗೆ ಉರುಳು ಸೇವೆ ಮಾಡಿಸುವರು ಆವರು ಮನುಷ್ಯರೆ?

  Reply

Leave a Reply

Your email address will not be published.