ಹೈದರಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಚಿನ್ನದ ಪದಕ ಪಡೆದ ಭತ್ತದ ನಾಡಿನ ಪುಟಾಣಿಗಳು


ಕೊಪ್ಪಳ : ಭಾರತ ಮತ್ತು ಆಸ್ಟ್ರೇಲಿಯಾ ಜಂಟಿ ಸಹಯೋಗದೊಂದಿಗೆ ಇತ್ತೀಚಿಗೆ ಹೈದ್ರಾಬಾದನ ವಿಜಯಭಾಸ್ಕರರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಭತ್ತದ ನಾಡಿನ ಪುಟಾಣಿಗಳು ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಗಂಗಾವತಿಯ ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿವೇಕ ಆಲೂರುಗೌಡ, ಭೂಮಿಕಾ ಗೌಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕಗಳಿಸಿ ಭತ್ತದ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ತೇಜು, ಸೊಹೀಲ್, ಪೃಥ್ವಿರಾಜ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಈ ಪುಟಾಣಿಗಳಿಗೆ ಕರಾಟೆ ಶಿಕ್ಷಕ ಅನ್ವರಪಾಷ, ತರಬೇತುದಾರ ಶಿವಪ್ರಸಾದ ಆಲೂರುಗೌಡ ತರಬೇತಿಯನ್ನು ನೀಡಿದ್ದು, ಇವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾ, ಶ್ರೀಲಂಕಾ, ಜಪಾನ, ಭೂತಾನ್, ನೇಪಾಳ, ಪಾಕಿಸ್ತಾನ, ಆಸ್ಟ್ರೇಲಿಯಾ ದೇಶಗಳ 3000 ಪುಟಾಣಿಗಳು ಈ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕರಾಟೆ ಜಾಗತಿಕ ತರಬೇತುದಾರರಾದ ಆಸ್ಟ್ರೇಲಿಯಾದ ವೈಯಾನ್ ಮ್ಯಾಕ್ ಡೊನಾಲ್ ಪುಟಾಣಿಗಳಿಗೆ ಶಹಭಾಸ್ಸಗಿರಿ ನೀಡಿ ಆಸ್ಟ್ರೇಲಿಯಾಕ್ಕೆ ಆಹ್ವಾನ ನೀಡಿದ್ದಾರೆ.

Leave a Reply

Your email address will not be published.