ಚಳ್ಳಕೆರೆ: ಶಾಸಕ ಟಿ.ರಘುಮೂರ್ತಿ ವಿವಿಧ ಕಾಮಗಾರಿಗಳಿಗೆ ಚಾಲನೆ


ಚಳ್ಳಕೆರೆ:  ಶಾಸಕ ಟಿ.ರಘುಮೂರ್ತಿ ತಾಲೂಕಿನ ಕಾಪರಹಳ್ಳಿ – ಹುಲಿಕುಂಟೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.

ತಾಲೂಕಿನ ಸಾಣೀಕೆರೆ ಸಿಡ್ಲಯ್ಯನಕೋಟೆ ರಸ್ತೆ ಅಭೀವೃದ್ಧಿಗೆ 40 ಲಕ್ಷ, ಕಾಪರಹಳ್ಳಿ – ಹುಲಿಕುಂಟೆ ರಸ್ತೆ ಅಭಿವೃದ್ಧಿ 80 ಲಕ್ಷ, ಯಲಗಟ್ಟೆ ಎಸ್ಟಿ ಕಾಲೋನಿ 20 ಲಕ್ಷ, ಕೋನಿಗರಹಳ್ಳಿ ಎಸ್ಸಿ ಕಾಲೋನಿ 10 ಲಕ್ಷ, ಮೇಲುಕೋಟೆ ಎಸ್ಟಿ 50 ಲಕ್ಷ, ಟಿ.ಎನ್.ಕೋಟೆ ಎಸ್ಟಿ ಕಾಲೋನಿ 19 ಲಕ್ಷ, ಟಿ.ಎನ್.ಕೋಟೆ- ಓಬಳಾಪುರ ರಸ್ತೆ ಅಭಿವೃದ್ಧಿ 25 ಲಕ್ಷ, ದೊಡ್ಡಚೆಲ್ಲೂರು- ಟಿ.ಎನ್.ಕೋಟೆ ರಸ್ತೆ ಅಭಿವೃದ್ಧಿ 50 ಲಕ್ಷ, ದೊಡ್ಡಚೆಲ್ಲೂರು ಹಿರಿಯೂರು ಗಡಿಯವರೆಗೆ ರಸ್ತೆ ಅಭಿವೃದ್ಧಿ 50 ಲಕ್ಷ, ದೊಡ್ಡೇರಿ, ರಡ್ಡಿಹಳ್ಳಿ, ಗೋಫನಹಳಿ,ಚಿಕ್ಕೇನಹಳ್ಳಿ, ಯಲಗಟ್ಟೆ, ಕೋನಿಗರಹಳ್ಳಿ ಮಾರ್ಗ ರಸ್ತೆ ಅಭಿವೃದ್ಧಿಗೆ 150 ಲಕ್ಷ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿದರು.

ಕಾಮಗಾರಿಗಳ ಗುಣ ಮಟ್ಟ ಹಾಗೂ ನಿಗಧಿದ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕರಲ್ಲಿ ಮನವಿ: ಜಡೆಕುಂಟೆ, ಚಿಕ್ಕೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುದ್ದಕುಡಿಯುವ ನೀರಿನ ಘಟಕಗಳಿಗೆ ನೀರಿಲ್ಲದೆ ಉದ್ಘಾಟನೆಯ ಭಾಗ್ಯ ಕಂಡಿಲ್ಲ ಇನ್ನು ಕೆಲವು ದುರಸ್ಥಿಗೆ ಬಂದಿವೆ ಎಂದು ದೂರಿದರೆ, ಯಗಘಟ್ಟೆ ಗೊಲ್ಲರಹಟ್ಟಿಯಲ್ಲಿ ಹೈಮಾಕ್ಸ್ ವಿದ್ಯ್‍ದೀಪ ಅಳವಡಿಸುವಂತೆ  ಶಾಸಕರಲ್ಲಿ ಮನವಿ ಮಾಡಿಕೊಂಡರು.

ತಾಪಂ ಸದಸ್ಯರಾದ ಎಚ್.ಆಂಜನೇಯ, ರಂಜಿತ, ಗಿರಿಯಪ್ಪ, ಎಇಇ ಸತೀಶ್‍ಬಾಬು ಇಂಜಿನಿಯರ್‍ಗಳಾದ ತಿಪ್ಪೇರುದ್ರಪ್ಪ, ಎಚ್.ಲೋಕೇಶ್, ಲಕ್ಷ್ಮಿನಾರಾಯಣ, ಪಿಡಿಒಗಳಾದ ಎನ್.ಶಶಿಕಲಾ, ಇರ್ಪಾನ್ ಇತರರಿದ್ದರು.

Leave a Reply

Your email address will not be published.