ಕಸ್ಟರ್ಡ್ ಹಲ್ವ ಆಹಾ……..!

ಕಸ್ಟರ್ಡ್ ಹಲ್ವ    ಆಹಾ……..!


ಬೇಕಾಗುವ ಸಾಮಾಗ್ರಿಗಳು
  • ಸಕ್ಕರೆ 1 ಬಟ್ಟಲು
  • ಕಸ್ಟರ್ಡ್ ಪುಡಿ – ಅರ್ಧ ಬಟ್ಟಲು
  • ಕೇಸರಿ ದಳ – 3-4
  • ತುಪ್ಪು – ಸ್ವಲ್ಪ
  • ಗೋಡಂಬಿ – ಸಣ್ಣಗೆ ಕತ್ತರಿಸಿದ್ದು ಅರ್ಧ ಹಿಡಿಯಷ್ಟು
ಮಾಡುವ ವಿಧಾನ
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅದಕ್ಕೆ ಸಕ್ಕರೆ ಹಾಗೂ ಕಸ್ಟರ್ಡ್ ಪುಡಿ, ಒಂದು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪು ಹಾಕಿ. ತುಪ್ಪ ಕಾದ ಬಳಿಕ ಗೋಡಂಬಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಕಸ್ಟರ್ಡ್ ಪುಡಿ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಬಳಿಕ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 25-30 ನಿಮಿಷಗಳ ಸುಧೀರ್ಘವಾಗಿ ಬಾಣಲೆ ತಳಬಿಡುವವರೆಗೂ ಕೈಯಾಡಿಸುತ್ತಿರಬೇಕು. ಬಳಿಕ ತಟ್ಟೆಯೊಂದಕ್ಕೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ, ಅಲಂಕರಿಸಿದರೆ, ರುಚಿಕರವಾದ ಕಸ್ಟರ್ಡ್ ಹಲ್ವ ಸವಿಯಲು ಸಿದ್ಧ.

Leave a Reply

Your email address will not be published.