ಎನ್ ಕೌಂಟರ್ ಸ್ಕೆಚ್ ತಪ್ಪಿಸಿಕೊಂಡ ಸೈಂಟಿಸ್ಟ್ ಮಂಜ್ಯಾ..!


ಧಾರವಾಡ: ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸಿದ್ದ ಕುಮಾರ್ ಪಿಳ್ಳೆ ಕೊಲೆ ಪ್ರಕರಣದಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಪ್ರಮುಖ ಆರೋಪಿ ಸೈಂಟಿಸ್ಟ್ ಮಂಜ್ಯಾನನ್ನು ಪೊಲೀಸರು ಎನ್ ಕೌಂಟರ್ ಮಾಡಲು ತೀರ್ಮಾನಿಸಿದ್ದರು ಎಂಬ ಸುದ್ದಿ ಅರಿತ ಸೈಂಟಿಸ್ಟ್ ಮಂಜ್ಯಾ ಧಾರವಾಡ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಪೊಲೀಸರು ಹಾಕಿದ್ದ ಎನ್ ಕೌಂಟರ್ ಸ್ಕೆಚ್ ನಿಂದ ಪಾರಾಗಿದ್ದಾನೆ.

ನಿನ್ನೆಯಷ್ಟೇ ಮಂಜ್ಯಾ ಆತನ ಸಹಚರರಾದ ರಾಕೇಶ್ ಪವಾರ, ಸೈಯದ್ ಅವರೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ. ಅವರನ್ನು ಹೆಚ್ಚಿನ ತನಿಖೆಗಾಗಿ ಆರು ದಿನಗಳ ಕಾಲ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದ್ದು, ಹುಬ್ಬಳ್ಳಿ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪಿಳ್ಳೆ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೈಂಟಿಸ್ಟ್ ಮಂಜ್ಯಾ ಪೊಲೀಸರಿಂದ ಕಣ್ತಪ್ಪಿಸಿ ಅಡ್ಡಾಡುತ್ತಿದ್ದ. ಇದರಿಂದ ಪೊಲೀಸರು ಮಂಜ್ಯಾನನ್ನು ಎನ್ ಕೌಂಟರ್ ಮಾಡಲು ತೀರ್ಮಾನಿಸಿದ್ದರು ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸ್ವತಃ ಮಂಜ್ಯಾನೇ ತನ್ನ ಇತರ ಸಹಚರರೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಪೊಲೀಸರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾನೆ.

Leave a Reply

Your email address will not be published.