ಕರ್ನಾಟಕ ಬಂದ್ ಹಿನ್ನಲೆ: ಧಾರವಾಡದಲ್ಲಿ ತೀವ್ರ ಕಟ್ಟೆಚ್ಚರ


ಧಾರವಾಡ: ಜ.25 ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದಾರೆ.

ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ., ಕಳಸಾ, ಬಂಡೂರಿ ಹಾಗೂ ಮಹಾದಾಯಿ ಹೋರಾಟದ ಪ್ರಮುಖ ಕೇಂದ್ರವಾಗಿರುವ ನವಲಗುಂದದಲ್ಲೂ ಬಂದ್ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

11 ಡಿಎಆರ್, 6 ಕೆಎಸ್ಆರ್ ಪಿ ತುಕಡಿಗಳನ್ನು ಹೊರಗಡೆಯಿಂದ ಕರೆಯಿಸಿಕೊಳ್ಳಲಾಗಿದೆ. 12 ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿಗಳನ್ನು ಫಿಕ್ಸ್ ಮಾಡಲಾಗಿದೆ. 12 ವೀಡಿಯೋ ಕ್ಯಾಮೆರಾಗಳ ಮೂಲಕ ಬಂದ್ ಪ್ರತಿಭಟನೆಗಳನ್ನು ಸೆರೆ ಹಿಡಿಯಲಾಗುವುದು. 125 ಜನ ಪೊಲೀಸ್ ಕಾನಸ್ಟೇಬಲ್ ಗಳು, 31 ಜನ ಎಎಸ್ಐ, 17 ಜನ ಸಿಪಿಐ, 37 ಜನ ಪಿಎಸ್ಐ ಹಾಗೂ ಒಬ್ಬರು ಹೆಚ್ಚುವರಿ ಎಸ್ಪಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಹಾದಾಯಿಗಾಗಿ ತೀವ್ರ ಹೋರಾಟ ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಸಂಗೀತ ತಿಳಿಸಿದ್ದಾರೆ.

 

 

Leave a Reply

Your email address will not be published.