ಪಾಂಡವಪುರ: ಜ.20 ರಂದು ಪರಿವರ್ತನಾ ರ್ಯಾಲಿ


ಪಾಂಡವಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಪರಿವರ್ತನಾ ರ್ಯಾಲಿ ಜ.20 ರಂದು ಪಾಂಡವಪುರಕ್ಕೆ ಆಗಮಿಸಲಿದ್ದು, ರ್ಯಾಲಿ ಸ್ವಾಗತಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ.ಮ.ರಮೆಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು 20ನೇ ರ್ಯಾಲಿಯಾಗಿದ್ದು, ಪಾಂಡವಪುರದಲ್ಲಿ ಸುಮಾರು 5ಸಾವಿರ ಜನ ಸೇರುವ ಸಾಧ್ಯತೆ ಇದೆ, ಪಟ್ಟಣದ ವಾಜಿದ್ ಸರ್ಕಲ್‍ನಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ಯಡಿಯೂರಪ್ಪ ಅವರನ್ನು ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರೇಖಿ ಚಿಕಿತ್ಸಕ ಬಾಲಕೃಷ್ಣ ಗುರುಜಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮೂಲತಃ ಪಾಂಡವಪುರ ಪಟ್ಟಣದವರಾದ ಅವರು ಸಧ್ಯ ಉದ್ಯೋಗ ನಿಮಿತ್ತ ಬೆಂಗಳೂರು ನಗರದಲ್ಲಿ ವಾಸವಾಗಿದ್ದಾರೆ. ರೇಖಿ ಚಿಕಿತ್ಸಕರಾದ ಬಾಲಕೃಷ್ಣ ಗುರುಜೀ ಕೆಲವು ವಾಹಿನಿಗಳಲ್ಲಿ ಚಿಕಿತ್ಸೆಯ ಬಗ್ಗೆ ಕಾರ್ಯಕ್ರಮ ನೀಡುತ್ತಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಅವರು ಬಾಲಕೃಷ್ಣ ಗುರೂಜಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ನಂತರ ಮಾತನಾಡಿದ ಗುರೂಜಿ, ನಾನು ಮೂಲತಃ ಪಾಂಡವಪುರ ಪಟ್ಟಣದವನು, ಕೆಲಸ ಅರಸಿ ಬೆಂಗಳೂರು ಸೇರಿದ್ದೆ, ಈಗ ನನಗೆ ನನ್ನ ಊರಿನ ಸೇವೆ ಮಾಡಲು ಆಸಕ್ತಿಯಾಗಿದೆ, ಇದರಿಂದಾಗಿ ಬಿಜೆಪಿ ಸೇರಿ ಜನಸೇವೆ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ತಾ.ಪಂ.ಸದಸ್ಯೆ ಮಂಗಳಾ, ಮುಖಂಡ ಎಂ.ಎನ್.ಈರೇಗೌಡ, ಶ್ರೀನಿವಾಸ ನಾಯಕ, ಮಹೇಶ, ಎಂ.ಎಸ್.ಮಂಜುನಾಥ್, ನವೀನ ಮುಂತಾದವರು ಇದ್ದರು.

Leave a Reply

Your email address will not be published.