ಸಿದ್ದರಾಮಯ್ಯನವರ ಯೋಜನೆಗಳನ್ನು ಜನತೆಯ ಬಾಗಿಲಿಗೆ ಮುಟ್ಟಿಸಲು ಕಾರ್ಯಕರ್ತರು ಮುಂದಾಗಬೇಕು-ಮಹಾಂತೇಶ ಕೌಜಲಗಿ


ಬೈಲಹೊಂಗಲ:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಜನತೆಯ ಬಾಗಿಲಿಗೆ ಮುಟ್ಟಿಸಲು ಕಾರ್ಯಕರ್ತರು ಮುಂದಾಗಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕೌಜಲಗಿ ಹೇಳಿದರು.

ಅವರು ತಾಲೂಕಿನ ನಯಾನಗರ ಗ್ರಾಮದಲ್ಲಿ ಕಾಂಗ್ರೇಸ್  ಕಾರ್ಯಕರ್ತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಜನತೆಗೆ ಮನದಟ್ಟಾಗುವಂತೆ ತಿಳುವಳಿಕೆ ನೀಡಬೇಕೆಂದರು. ಕಾಂಗ್ರೇಸ್ ಕಾಯ9ಕತ9ರು ವಿದಾನಸಭಾ ಚುನಾವಣೆಗೆ ಸನ್ನದರಾಗಬೇಕೆಂದು ಕರೆ ನೀಡಿದರು.

ವೇದಿಕೆ ಮೇಲೆ ಬ್ಲಾಕ್ ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ, ಜಿಪಂ ಸದಸ್ಯ ಅನೀಲ ಮೇಕಲಮರ್ಡಿ  ಕಾಂಗ್ರೆಸ್  ಯುವ ಮುಖಂಡ ಕಾರ್ತಿಕಗೌಡ ಪಾಟೀಲ, ತಾಪಂ ಸದಸ್ಯ ಶ್ರೀಕಾಂತ ಸುಂಕದ ಇದ್ದರು. ಮುಖ್ಯಅತಿಥಿಗಳಾಗಿ ಸಚೀನ ಪಾಟೀಲ, ನಾನಾಸಾಹೇಬ ಸೂರ್ಯವಂಶಿ, ಬಾಬು ಹುಚ್ಚಗೌಡರ, ಮಾಬಲೇಶ್ವರ ಮರೆಕ್ಕನವರ, ಶ್ರೀಕಾಂತಗೌಡ ಪಾಟೀಲ, ಗ್ರಾಪಂ ಸದಸ್ಯ ಭೀಮಪ್ಪ ಕರಿದೇಮನ್ನವರ, ಚಂದ್ರು ಕಲಾಲ, ಯಲ್ಲಪ್ಪ ಸಂಗೊಳ್ಳಿ, ಪಕ್ಕೀರ ತೋಟಗಿ, ನಿಂಗನಗೌಡ ಖನಿನಾಯ್ಕರ, ಮಲ್ಲಪ್ಪ ಕರಿದೇಮನ್ನವರ, ಬಸಪ್ಪ ಅಂಗಡಿ, ಮಲ್ಲಪ್ಪ ಏಣಗಿ, ನಾಗಪ್ಪ ದೇವಲಾಪೂರ, ನಾಗಪ್ಪ ಮುತವಾಡ, ಮಡಿವಾಳಪ್ಪ ಅಬ್ಬಾರ, ಈರಣ್ಣಾ ಉಗರಖೋಡ, ಭೀಮಶೆಪ್ಪ ಮುತಗಿ, ಚಂದ್ರಪ್ಪ ಮುತಗಿ, ಈರಪ್ಪ ದಳವಾಯಿ, ರಾಮಣ್ಣ ಕೋಳಿ, ಅಂಬಣ್ಣ ಎಲಿಗಾರ, ಚನ್ನಪ್ಪ ಹತ್ತಿಆಗಮಿಸಿದ್ದರು.

ಈ ಸಂದರ್ಭದಲ್ಲಿ ಬಸವೇಶ್ವರ ಭಜನಾ ಮಂಡಳಿಯ ಮಡೆಪ್ಪ ಮರೆಕ್ಕನವರ, ಯಲ್ಲಪ್ಪ ಹೂವಿನ, ಹಸನಸಾಬ ನಧಾಪ, ಶಿವಪ್ಪ ಅಗಸಿಬಾಗಿಲ, ಬಸವರಾಜ ಮಡಿವಾಳರ, ರಾಮಪ್ಪ ಚಂದರಗಿ, ಶ್ರೀಕಾಂತ ನಲವಡೆ, ದಸ್ತಗೀರ ನಧಾಪ, ಗಂಗಪ್ಪ ಖೂದನವರ, ಭೀಮಶಿ ಹುಡೇದ, ನೀಲಕಂಠ ಹೊಸಮನಿ, ರವಿ ದಳವಾಯಿ, ಕೖಷ್ಣ ಎಲಿಗಾರ, ಈರಪ್ಪ ಹುಣಶೀಕಟ್ಟಿ, ರಾಜು ಸೂಯ9ವಂಶಿ, ಉಮೇಶ ಸಂಗೊಳ್ಳಿ, ಶಿವನಪ್ಪ ಅಳಗುಡಿ, ನಿಂಗಪ್ಪ ಅಳಗುಡಿ, ಶಿವಪ್ಪ ಮಡಿವಾಳರ ಕಾಂಗ್ರೇಸ್ ಸೇರ್ಪಡೆಗೊಂಡರು.

Leave a Reply

Your email address will not be published.