ಬೈಲಹೊಂಗಲ: ಬ್ರಾಹ್ಮಣರ ನಿಂದನೆಯನ್ನು ಖಂಡಿಸಿ ಬ್ರಾಹ್ಮಣ ಸಮಾಜ ಬಾಂದವರು ಪ್ರತಿಭಟನೆ


ಬೈಲಹೊಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಪ್ರಿಯವಾದ ಬ್ರಾಹ್ಮಣ ಸಮಾಜವನ್ನು, ಬ್ರಾಹ್ಮಣರ ಕುರಿತು ಅವಹೇಳನಕಾರಿ ನಿಂದನೆಯನ್ನು ಖಂಡಿಸಿ ಬೈಲಹೊಂಗಲ ತಾಲೂಕಾ ಬ್ರಾಹ್ಮಣ ಸಮಾಜ ಸೇವಾ ಸಂಘ ಮತ್ತು ಸ್ಥಳೀಯ ಬ್ರಾಹ್ಮಣ ಸಮಾಜದವರು ಕಪ್ಪು ಪಟ್ಟಿಕಟ್ಟಿಕೊಂಡು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಾಡ ಕಚೇರಿಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತ ಪಡಿಸಿ ಮನವಿ ಸಲ್ಲಿಸಿದರು.

ಮುರಗೋಡ ಗ್ರಾಮದ ಹಳೆ ಬಸ್ ನಿಲ್ದಾಣ ಹತ್ತಿರವಿರುವ ಹನಮಂತ ದೇವರ ದೇವಸ್ಥಾನದಲ್ಲಿ ಸೇರಿದ ನೂರಾರು ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು ಸೇರಿ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಧಿಕ್ಕಾರದ ಘೋಷನೆಗಳನ್ನು ಕೂಗುತ್ತ ಜಂಗವಾಡ ಕ್ರಾಸ್ ಬಳಿ ಮಾನವ ಸರಪಳಿ ನಿಮಿ9ಸಿ ಸಮಾಜದ ಬಗ್ಗೆ ಅವಹೇಳನಕಾರಿ ಮಾಡಿದವರ ಬಗ್ಗೆ ತೀವೖ ಆಕ್ರೋಶ ವ್ಯಕ್ತ ಪಡಿಸಿ ರಸ್ತೆ ತಡೆ ನಡೆಸಿದರು.

ನಂತರ ಪ್ರತಿಭಟನಾಕಾರರು ಉಪತಶೀಲ್ದಾರ ನಾಡ ಕಚೇರಿಗೆ ಮುತ್ತಿಗೆ ಹಾಕಿ ಮನವಿ ನೀಡಲು ಮುಂದಾದಾಗ ಕಚೇರಿಯಲ್ಲಿ ಅಧಿಕಾರಿಗಳು ಯಾರು ಇಲ್ಲದ ಕಾರಣ ತೀವೖ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಿದರು ಗೈರಾಗಿದ್ದರು ಇದನ್ನು ಖಂಡಿಸಿ ಅವರ ವಿರುದ್ದ ದಿಕ್ಕಾರದ ಘೋಷಣೆ ಕೂಗಿ ಪ್ರತಿಭಟನೆ ತೀವೖಗೊಂಡಾಗ ಎಚ್ಚೆತ್ತಕೊಂಡ ಪಿಎಸ್ಐ ಪ್ರಸಾದ ಪಣೇಕರ ನಾಡ ಕಛೇರಿಗೆ ಬೀಗ ಹಾಕುವದನ್ನು ತಡೆದು ಪ್ರತಿಭಟನಾಕಾರರನ್ನು ಮನವೊಲಿಸಿದರು.

ತಡವಾಗಿ ಆಗಮಿಸಿದ ಕಂದಾಯ ನಿರೀಕ್ಷಕ ಆರ್.ಎಸ್. ಹೋಲಿ ಅವರು ಸಮಾಜದ ಮುಖಂಡರನ್ನು ಕ್ಷಮೆಯಾಚಿಸಿ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸಕಾ9ರದ ಗಮನ ಸೆಳೆಯುವಾಗಿ ಭರವಸೆ ನೀಡಿದರು.
ಸಮಾಜದ ಮುಖಂಡರಾದ ಡಿ,ಎ ಕುಲಕಣಿ9, ಅಶೋಕರಾವ ದೇಶಪಾಂಡೆ, ಪಂಡರಿನಾಥ ಜ್ಯೋಷಿ, ರಮೇಶ ದೇಶಪಾಂಡೆ ಮಾತನಾಡಿ, ಬ್ರಾಹ್ಮಣ ಸಮಾಜ ಶಾಂತಿ ಪ್ರಿಯರಾಗಿ ಧಾಮಿ9ಕ ಕಾಯ9ಕ್ರಮಗಳಲ್ಲಿ ಸದಾ ತಲ್ಲಿನರಾಗಿರುತ್ತಾರೆ. ಯಾವ ಸಮಾಜಕ್ಕೆ ನೋವುನ್ನುಂಟು ಮಾಡದೆ ಎಲ್ಲರೊಂದಿಗೆ ಸಹಕಾರ, ಸಹಬಾಳ್ವೆಯಿಂದ ನಡೆದುಕೊಂಡು ಬರುತ್ತಿದ್ದಾರೆ. ಇಂತಹ ಕಷ್ಟದ ದಿನಮಾನಗಳಲ್ಲಿ ಯಾವುದೇ ಮೀಸಲಾತಿಗೆ ಸೌಲಭ್ಯಗಳಿಗಾಗಿ ಬೇಡಿಕೆ ಒಡ್ಡದೇ ಕಷ್ಟದಿಂದ, ಸ್ವಾಭಿಮಾನದಿಂದ ಬದುಕುತ್ತಿರುವುದು ಬ್ರಾಹ್ಮಣರ ಗುಣ ಲಕ್ಷಣಗಳಾಗಿವೆ, ಆದರೆ ಇಂದು ಬ್ರಾಹ್ಮಣರ ಮೇಲೆ ಸಾಮಾಜಿಕ ಜಾಲತಾನದಲ್ಲಿ ಮತ್ತು ವಿವಿಧ ರೀತಿಯಲ್ಲಿ ನಿಂದಿಸುತ್ತಿರುವದು ಅತ್ಯಂತ ಖಂಡನೀಯವಾಗಿದೆ. ಕೂಡಲೇ ಸಕಾ9ರ ಇಂತವರ ವಿರುದ್ದ ಕಾನೂನಿನ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಸಂದ್ಯಾ ತಿವಾರಿ, ಡಾ.ಎಮ್. ಎಮ್. ರಾಣೇಕರ, ಬಿ.ಆರ್. ಜ್ಯೋಷಿ, ಆರ್. ಎ .ದೇಶಪಾಂಡೆ, ಡಾ: ಗಿರೀಶ ಕುಲಕಣಿ9, ಸಂತೋಷ ದೇಶಪಾಂಡೆ, ಚಿದಂಬರ ತೊರಗಲ್ಲ, ಶ್ರೀಕಾಂತ ದೇಶಪಾಂಡೆ, ಸುನೀಲ ತಿವಾರಿ, ಬಂಡುರಾವ ಕುಲಕಣಿ9, ನಟರಾಜ ದಿಕ್ಷೀತ, ವಿಲಾಸ ತಿವಾರಿ, ಮಹೇಶ ದೇಶಪಾಂಡೆ ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು,

Leave a Reply

Your email address will not be published.