ಕಾರು-ಬೈಕ್ ಮಧ್ಯೆ ಭೀಕರ ಅಪಘಾತ: ಇಬ್ಬರು ದಾರುಣ ಸಾವು


ಬಾಗಲಕೋಟೆ:  ಕಾರು- ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೀರಿಕೇರಿ ಕ್ರಾಸ್ ಬಳಿ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದ ನಿಂಗಪ್ಪ ಮಲ್ಲಾಡರ, ಬಾಗವ್ವ ಸೊನ್ನದ ಮೃತ ದುರ್ದೈವಿಗಳು. ನಿಂಗಪ್ಪ ಬಾಗಲಕೋಟೆಯ ಸಂಗೊಳ್ಳಿರಾಯಣ್ಣ ಯುವಘರ್ಜನೆ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಬೈಕ್ ಮೇಲೆ ಗ್ರಾಮದ ಕಡೆ ತೆರಳುತ್ತಿರುವಾಗ ಅವಘಡ ಸಂಭವಿಸಿದೆ.

ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.