ಚಿಕ್ಕಮಗಳೂರು: ಗಂಟಲಲ್ಲಿ ಅವಲಕ್ಕಿ ಸಿಲುಕಿ ಮಗು ಸಾವು


ಚಿಕ್ಕಮಂಗಳೂರು: ಗಂಟಲಲ್ಲಿ ಸೇಬು ಹಣ್ಣಿನ ಅಗಳು ಸಿಕ್ಕು ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದಿದ್ದಯ, ಮೂರು ವರ್ಷದ ಮಗುವಿನ ಗಂಟಗಲ್ಲಿ ಅವಲಕ್ಕಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದದ ನಿವಾಸಿಗಳಾದ ದುರ್ಗಾಪ್ರಸಾದ್ ಅವರ ಮಗ ಅನೀಶ್(3) ಮೃತ ಮಗು.

ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಉಸಿರಾಟದ ತೊಂದರೆಯಿಂದ ಮಗು ಅಸ್ವಸ್ಥಗೊಂಡಿದ್ದು,  ಚಿಕಿತ್ಸೆಗಾಗಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ  ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ಖಾಸಗಿ ವೈದ್ಯರು ಕೂಡ ಹಾಸನಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದ್ದರು ಪೋಷಕರು ಮಗುವನ್ನು ಹಾಸನಕ್ಕೆ ಕರೆದೊಯ್ಯವಾಗ ಸಮಯಕ್ಕೆ  ಸೂಕ್ತ ಚಿಕಿತ್ಸೆ ಸಿಗದ ಹಿನ್ನಲೆ ಮಾರ್ಗ ಮಧ್ಯೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಕಲ ದಿನಗಳ ಹಿಂದಷ್ಟೇ ಗಂಟಲಿನಲ್ಲಿ ತಂಗಿನ ಚೂರು ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.

Leave a Reply

Your email address will not be published.