ಚಿಕ್ಕೋಡಿ ಜಿಲ್ಲೆ ರಚನೆಗೆ ಗಮನ ಹರಿಸದ ಸಿಎಂ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ

 

ಚಿಕ್ಕೋಡಿಯಲ್ಲಿ ಚಿಕ್ಕೋಡಿ ಜಿಲ್ಲೆಗಾಗಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮತ್ತು ಲಕ್ಷ್ಮಣರಾವ ಚಿಂಗಳೆ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದರು.

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ರಚನೆ ಮಾಡುವ ಕುರಿತು ಮೇಲಿಂದ ಮೇಲೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಮಿನಿವಿಧಾನ ಸೌದ ಎದುರು ಕಳೆದ 9 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. 14 ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೆ ಅತಿ ದೊಡ್ಡ ಜಿಲ್ಲೆಯಾಗಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ಮಾಡಬೇಕಾದ ಅಗತ್ಯವಿದೆ. ಚಿಕ್ಕೋಡಿ ಜಿಲ್ಲೆಯಾಗಲು ಯಾರದೂ ಬಿನ್ನಮತವಿಲ್ಲ. ಈ ಕುರಿತು ಕಾಲ ಕಾಲಕ್ಕೆ ಸಿಎಂ ಗಮನ ತರಲಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳ ಇದನ್ನು ಗಂಭೀರವಾಗಿ ತೆಗೆದುಕೊಂಡು ಯಾರ ಮನಸ್ಸಿಗೂ ನೋವಾಗದಂತೆ ಜಿಲ್ಲಾ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರಚನೆ ಕುರಿತು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವೃ ಸ್ವರೂಪ ಪಡೆದುಕೊಳ್ಳುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಸುದ್ದಿ ಮುಟ್ಟಿಸುವುದಾಗಿ ಹೇಳಿದರು. ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಮಾಡುವುದರಿಂದ ಅಭಿವೃದ್ಧಿಯಾಗಲಿದೆ.

ರಾಜಕಾರಣಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಜನರ ಹಿತದೃಷ್ಟಿಯಿಂದ ಜಿಲ್ಲೆಯಾಗಬೇಕು. ಇದರಲ್ಲಿ ಜಿಲ್ಲೆಗಾಗಿ ಹೋರಾಟ ನಡೆಸುತ್ತಿವವರ ಸ್ವಾರ್ಥವಿಲ್ಲ ಎಂದರು.

ಮಾನವ ಬಂಧುತ್ವ ವೇದಿಕೆ ಸದಸ್ಯ ಸಿದ್ದಾರ್ಥ ಗಾಯಗೋಳ ಮಾತನಾಡಿ, ಕಳೆದ 9 ದಿನಗಳಿಂದ ಜಿಲ್ಲೆಗಾಗಿ ಹೋರಾಟ ನಡೆಸುತ್ತಿದ್ದರೂ ಸಹ ಸರಕಾರ ಗಮನ ಹರಿಸದಿರುವುದು ನಾಚೀಕೆಗೇಡಿನ ಸಂಗತಿ. ಈಗಲಾದರೂ ಸಿಎಂ ಸಿದ್ದರಾಮಯ್ಯ ನಿದ್ರಾವಸ್ಥೆಯಿಂದ ಹೊರಗೆ ಬಂದು ಚಿಕ್ಕೋಡಿ ಜಿಲ್ಲೆಯತ್ತ ಗಮನ ಹರಿಸಬೇಕು.

ಒಂದು ವೇಳೆ ಚಿಕ್ಕೋಡಿ ಜಿಲ್ಲೆ ಮಾಡಲು ಸರಕಾರ ಹಿಂದೇಟು ಹಾಕಿದರೇ ಚಿಕ್ಕೋಡಿ ಜಿಲ್ಲಾ ರಚನೆಗಾಗಿ ಮಾನವ ಬಂಧುತ್ವ ವೇದಿಕೆ ಯಾವ ತ್ಯಾಗಕ್ಕೂ ಸಿದ್ದವಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ದತ್ತು ಹಕ್ಯಾಗೋಳ, ನಿಪ್ಪಾಣಿ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ, ರಾಮಾ ನಿಕಮ, ನಿತೀನ ಸಾಳುಂಕೆ, ದಾಸಪ್ರಸಾದ ಶೆಟ್ಟಿ, ಪ್ರಕಾಶ ವಂಟಮುತ್ತದೆ, ಚಂದ್ರಕಾಂತ ಹುಕ್ಕೇರಿ, ಎಸ್.ವೈ.ಹಂಜಿ, ಸುರೇಶ ಬ್ಯಾಕೂಡೆ, ಸಂಜು ಬಡಿಗೇರ,ಮ ಪ್ರಭಾಕರ ಗಗರಿ, ಕಾಡಗೌಡ ಪಾಟೀಲ, ಎಂ.ಆರ್.ಮುನ್ನೋಳಿಕರ, ಅಪ್ಪಾಸಾಬ ಬ್ಯಾಳಿ, ಶಿವು ಮರ್ಯಾಯಿ ಹಾಗೂ ಪತ್ರಕರ್ತರ ಸಂಘ,ಮಾನವ ಬಂಧುತ್ವ ವೇದಿಕೆ, ಕರವೇ, ದಲಿತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published.