ಗೂಡ್ಸ್ ಆಟೊಗೆ ಡಿಕ್ಕಿ : ಬೈಕ್ ಸವಾರ ಸಾವು


ಪಾಂಡವಪುರ: ಚಲಿಸುತ್ತಿದ್ದ ಗೂಡ್ಸ್ ಆಟೋಗೆ ಹಿಂಬದಿಯಿಂದ  ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಹಾರೋಹಳ್ಳಿ ಗ್ರಾಮದ ಚಿಕ್ಕೇಗೌಡರ ಮಗ ಮಂಜುನಾಥ(40) ಮೃತ ಪಟ್ಟ ದುರ್ದೈವಿ.
ಮಂಜುನಾಥ್ ಪಟ್ಟಣದ ಅನಂತರಾಮನ್ ವೃತ್ತದ ಬಳಿಯ ಹೆಚ್‍ಪಿ ಗ್ಯಾಸ್ ಗೋಡೌನ್ ಮುಂಭಾಗ ಕೆಆರ್‍ಎಸ್ ಕಡೆ ಹೋಗುತ್ತಿದ್ದ ಆಫೆ ಗೂಡ್ಸ್ ಆಟೋ ಹಿಂದೆ ಬರುತ್ತಿದ್ದ ವೇಳೆ ಅಕಸ್ಮಾತ್ ಗೂಡ್ಸ್ ಆಟೋ ಚಾಲಕ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಮಂಜುನಾಥನ ಬೈಕ್ ಆಟೋಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಂಜುನಾಥ ಬೈಕ್‍ನಿಂದ ಕುಸಿದು ಬಿದ್ದನು, ಕೂಡಲೇ ಈತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟನು ಎನ್ನಲಾಗಿದೆ.
ಈ ಸಂಬಂಧ ಮೃತ ಮಂಜುನಾಥನ ಸಹೋದರ ಮರೀಗೌಡ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published.