ಹಣ ನೀಡಲು ಬಡ ವ್ಯಾಪಾರಿಗೆ ಬೆದರಿಕೆ: ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲು


ಧಾರವಾಡ: ಇಲ್ಲಿನ ತೇಜಸ್ವಿ ನಗರದಲ್ಲಿ ವಾಸವಿರುವ ಪೊರಕೆ ತಯಾರಿಸಿ ಜೀವನ ಸಾಗಿಸುವ ಬಡಪಾಯಿ ವ್ಯಾಪಾರಿಯೊಬ್ಬರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.

ಉತ್ತರ ಕರ್ನಾಟಕ ರಕ್ಷಣಾ ಸೇನೆಯ ಮುಖಂಡ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಮುನ್ನಾ ಇಫ್ತಾಕಾರ್ ಅಲಿ ಶೇಖ್ ಎಂಬ ಪೊರಕೆ ತಯಾರಿಸುವ ಬಡ ವ್ಯಾಪಾರಿಗೆ ಬೆದರಿಕೆ ಹಾಕಿದವನು. ಈ ವ್ಯಾಪಾರಿಗೆ ಉತ್ತರ ಕರ್ನಾಟಕ ರಕ್ಷಣಾ ಸೇನೆಯ ಮುಖಂಡ ಎಂದು ಹೇಳಿಕೊಂಡಿರುವ ಮಂಜುನಾಥ ಚೌಹಾಣ್ ಎಂಬಾತ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದ. ಅದೂ ಅಲ್ಲದೇ ನೀನು ಪೊರಕೆ ತಯಾರಿಸುವುದಕ್ಕೆ ಪರವಾನಿಗೆ ಇದೆಯೇ? ಇಲ್ಲದೇ ಹೋದರೆ 10 ಸಾವಿರ ರೂಪಾಯಿ ನೀಡಬೇಕು ಎಂದು ಹಣದ ಬೇಡಿಕೆ ಇಟ್ಟಿದ್ದ.

ಪೊರಕೆ ತಯಾರಿಸುವ ಪರವಾನಿಗಿ ಇಲ್ಲದೇ ಹೋದರೆ ಪಾಲಿಕೆ ಅಧಿಕಾರಿಗಳಿಂದ ನಿನ್ನ ಕಾರ್ಖಾನೆ ಮೇಲೆ ದಾಳಿ ಮಾಡಿಸುವ ಬೆದರಿಕೆಯನ್ನೂ ಆತ ಹಾಕಿದ್ದ ಎಂದು ಸ್ವತಃ ಆ ಬಡ ವ್ಯಾಪಾರಿ ಇಲ್ಲಿನ ವಿದ್ಯಾಗಿರಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹೇಳಿದ್ದಾನೆ. ಸದ್ಯ ಮಂಜುನಾಥ ಚೌಹಾಣ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published.